ಮುಸಲ್ಮಾನರ ಪವಿತ್ರ ಹಬ್ಬಗಳಲ್ಲಿ ಒಂದಾದ ಬಕ್ರೀದ್ ಕುರಿತು ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿ ಹೆಸರಿನಲ್ಲಿ ಒಂದು ಪೋಸ್ಟ್ ಮತ್ತು ಆ ಕುರಿತು ಇಮೇಜ್'ಗಳು ವಿವಿಧ ಭಾಷೆಗಳಲ್ಲಿ ವ್ಯಾಪಕವಾಗಿ ಶೇರ್ ಆಗಿತ್ತು.
"200 ಮಿಲಿಯನ್ ಮುಸ್ಲಿಮರು ನಿನ್ನೆ ಈದ್ ಆಚರಿಸಿದರು.
ಬಡವರು ಮತ್ತು ನಿರ್ಗತಿಕರಿಗೆ ಮಾಂಸವನ್ನು ವಿತರಿಸಿದರು..
ತಮ್ಮ ಸಂಬಂಧಿಕರನ್ನು ಭೇಟಿಯಾದರು..
ಅದ್ಭುತವಾದ ಆಹಾರವನ್ನು ಸೇವಿಸಿದರು.
ಮಕ್ಕಳಿಗೆ ಈದಿ ನೀಡಿ ಸಂತಸಗೊಳಿಸಿದರು..
ಅವರ್ಯಾರೂ ಕುಡಿದು ಮತ್ತೊಬ್ಬರ ಪೂಜಾ ಸ್ಥಳಕ್ಕೆ ಹೋಗಿ ಕುಣಿದು ಕುಪ್ಪಳಿಸಲಿಲ್ಲ,
ಎಂತಹ ಅದ್ಭುತ ಸಮುದಾಯ" ಎಂದು ಧ್ರುವ್ ರಾಠಿ ಬಣ್ಣಿಸಿದ್ದಾಗಿ ಫೋಟೋಗಳು ಮತ್ತು ಟ್ವಿಟರ್(X) ಸ್ಕ್ರೀನ್ ಶಾಟ್ ಶೇರ್ ಮಾಡಲಾಗಿತ್ತು !!.
ವಾಸ್ತವದಲ್ಲಿ ಬಕ್ರೀದ್ ಕುರಿತು ಧ್ರುವ್ ರಾಠಿ ಯಾವುದೇ ಪೋಸ್ಟ್ ಮಾಡಲಿಲ್ಲ ಎಂದು ಅವರ ಅಧಿಕೃತ ಟ್ವಿಟರ್ (X) ಅಕೌಂಟ್ ಪರಿಶೀಲಿಸಿದರೆ ವ್ಯಕ್ತ. ಮತ್ತೆ ಶೇರ್ ಮಾಡಲಾದ ಟ್ವಿಟರ್ ಸ್ಕ್ರೀನ್ ಶಾಟ್ ಧ್ರುವ್ ರಾಠಿ ಅಭಿಮಾನಿಗಳು ನಿರ್ಮಿಸಿದ Fan ಅಕೌಂಟ್ ಮತ್ತು ಅಣಕ ಅಕೌಂಟ್ ಆಗಿದೆ. ಅದು ಅದರ ಹೆಸರಿನ ಮುಂದೆಯೇ ವ್ಯಕ್ತಪಡಿಸಿದ್ದು ಕಾಣಬಹುದು .
To post your articles and news,please signup. This facility will be available soon. Please wait...
© www.idondusuddi.site. All Rights Reserved. Design by myweb