ಪಾಣೆಮಂಗಳೂರು: ಇಲ್ಲಿನ ಆಲಡ್ಕ ಬದ್ರಿಯಾ ಜುಮಾ ಮಸ್ಜಿದ್ ಅಧೀನದಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಶೈಖ್ ಜೀಲಾನಿ ಅನುಸ್ಮರಣೆ, ಖುತುಬಿಯ್ಯತ್- ರಾತೀಬ್ ವಾರ್ಷಿಕ ಮತ್ತು ತಾಜುಲ್ ಉಲಮಾ ಅನುಸ್ಮರಣೆ ಇದರ ಮೂರು ದಿವಸಗಳ ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮ ಇಂದು ಬದ್ರಿಯಾ ಜುಮಾ ಮಸ್ಜಿದ್ ವಠಾರದ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ.
ಮರ್ಹೂಂ ಖಾಝಿ ಕೂರತ್ ತಂಗಳ ಸುಪುತ್ರ ಮಶ್'ಹೂದ್ ತಂಗಳ್ ದುಆ ಅಶೀರ್ವಚನ ನೀಡಲಿದ್ದಾರೆ, ಖ್ಯಾತ ವಾಗ್ಮಿ ನೌಫಳ್ ಸಖಾಫಿ ಕಳಸ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.
ಸ್ಥಳೀಯ ಮುದರ್ರಿಸ್ ಅಶ್ರಫ್ ಸಖಾಫಿ ಉಸ್ತಾದ್ ಅಧ್ಯಕ್ಷತೆ ವಹಿಸಲಿದ್ದಾರೆ, BJM ಗೌರವಾಧ್ಯಕ್ಷರಾದ ಡಾ MM ಶರೀಫ್ ಮುಖ್ಯ ಅತಿಥಿಯಾಗಿ ವೇದಿಕೆಯಲ್ಲಿ ಉಪಸ್ಥಿತರಿರಲಿದ್ದಾರೆ.
ಸ್ತ್ರೀಯರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಏರ್ಪಡಿಸಲಾಗಿದ್ದು , ಕೊನೆಯಲ್ಲಿ ತಬರ್ರುಖ್ ವಿತರಣೆ ಕೂಡಾ ನಡೆಯಲಿದೆ..
To post your articles and news,please signup. This facility will be available soon. Please wait...
© www.idondusuddi.site. All Rights Reserved. Design by myweb