ಹರಿಯಾಣ : ಇಲ್ಲಿನ ರವೇರಿ-ಡೆಲ್ಲಿ ಹೈವೇ ಅಲ್ಲಿ ಅಮಿತ ವೇಗದಲ್ಲಿ ಬಂದ ಕಾರು ರಸ್ತೆ ಬದಿ ನಿಲ್ಲಿಸಿದ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದು ಆರು ಜನರು ಅಸುನೀಗಿದ್ದಾರೆ , ಆರು ಜನರಿಗೆ ಗಾಯಗಳು ಆಗಿದೆ .
ಮರಣ ಹೊಂದಿದವರಲ್ಲಿ ನಾಲ್ಕು ಜನರು ಉತ್ತರ ಪ್ರದೇಶದವರು , ಹಿಮಾಚಲ್ ಪ್ರದೇಶ ಮತ್ತು ಹರಿಯಾಣದ ಒಬ್ಬೊಬ್ಬರು ಎಂದು ಪೊಲೀಸರು ತಿಳಿಸಿದ್ದಾರೆ . ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ..
ಕಾರಿನ ಟಯರ್ ಪಂಚರ್ ಆದ ಕಾರಣ ರಸ್ತೆ ಬದಿ ನಿಲ್ಲಿಸಿ ಡ್ರೈವರ್ ಟಯರ್ ಬದಲಾಯಿಸುತ್ತಿರುವ ನಡುವೆ ಅತಿ ವೇಗದಲ್ಲಿ ಬಂದ ಮತ್ತೊಂದು ಕಾರ್ ಡಿಕ್ಕಿ ಹೊಡೆದು ಅಪಘಾತ ಉಂಟಾಯಿತು ಎಂದು ಪೊಲೀಸರು ಹೇಳಿದ್ದಾರೆ
To post your articles and news,please signup. This facility will be available soon. Please wait...
© www.idondusuddi.site. All Rights Reserved. Design by myweb