ಪಾಟ್ನಾ | ಬಿಹಾರದ ಸರನ್ ಜಿಲ್ಲೆಯಲ್ಲಿ
ಗಂಡಕಿ ನದಿಯನ್ನು ದಾಟಲು ಕಟ್ಟಲಾಗಿರುವ ಸೇತುವೆ ಕುಸಿದಿದೆ. ಬಿಹಾರದಲ್ಲಿ ಎರಡು ವಾರಗಳಲ್ಲಿ ಕುಸಿದ 10ನೇ ಸೇತುವೆ ಇದಾಗಿದೆ. ಕೇವಲ ಹದಿನೈದು ವರ್ಷಗಳಷ್ಟು ಹಳೆಯದಾದ ಸೇತುವೆಯಾಗಿದೆ ಕುಸಿದದ್ದು. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಸೇತುವೆ ಕುಸಿತದ ಬಗ್ಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದು, ರಾಜ್ಯದ ಎಲ್ಲಾ ಸೇತುವೆಗಳನ್ನು ಪರಿಶೀಲಿಸಲು ಆದೇಶಿಸಲಾಗಿದೆ. ಕಳೆದೆರಡು ದಿನಗಳಿಂದ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಸೇತುವೆಗಳ ಕುಸಿತಕ್ಕೆ ನೀರಿನ ಮಟ್ಟ ಮತ್ತು ಹರಿವು ಹೆಚ್ಚಿರುವುದೇ ಕಾರಣ ಎಂದು ಅಂದಾಜಿಸಲಾಗಿದೆ.
ಸಿವಾನ್ ಜಿಲ್ಲೆಯ ಗಂಡಕಿ ನದಿಗೆ ಅಡ್ಡಲಾಗಿರುವ ಮತ್ತೊಂದು ಸೇತುವೆಯೂ ಹಾನಿಯಾಗಿದೆ. ಸೇತುವೆಗಳ ಕುಸಿತದ ಕಥೆ ಮುಂದುವರಿಯುತ್ತಿರುವಂತೆಯೇ, ಬಿಹಾರದಲ್ಲಿ ಮೂಲಸೌಕರ್ಯ ವೈಫಲ್ಯಕ್ಕಾಗಿ ರಾಜ್ಯ ಸರ್ಕಾರದ ಮೇಲೆ ವ್ಯಾಪಕ ಟೀಕೆಯಾಗುತ್ತಿದೆ.
ಇದಕ್ಕೂ ಮುನ್ನ ಮಧುಬನಿ, ಅರಾರಿಯಾ, ಪೂರ್ವ ಚಂಬರಾನ್ ಮತ್ತು ಕಿಶನ್‌ಗಂಜ್‌ನಲ್ಲಿ ಸೇತುವೆ ಕುಸಿದಿತ್ತು. ಸೇತುವೆ ಕುಸಿತಕ್ಕೆ ನಿತೀಶ್ ಕುಮಾರ್ ಸರ್ಕಾರದ ಭ್ರಷ್ಟಾಚಾರವೇ ಕಾರಣ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ..
To post your articles and news,please signup. This facility will be available soon. Please wait...
© www.idondusuddi.site. All Rights Reserved. Design by myweb