ಬಂಟ್ವಾಳ : ನದಿ ನೀರಿನಲ್ಲಿ ಆಟವಾಡಲು ತೆರಳಿದ ಬಾಲಕಿಯರು ನಿಯಂತ್ರಣ ಕಳೆದು ನದಿ ನೀರಿನಲ್ಲಿ ಮುಳುಗಿ ಮರಣ ಹೊಂದಿದ ಘಟನೆ ಇಂದು ಬಂಟ್ವಾಳ ನಾವುರ ಪ್ರದೇಶದಲ್ಲಿ ನಡೆದಿದೆ. ಉಳ್ಳಾಲ ನಿವಾಸಿಯಾದ ಅನ್ಸಾರ್ ಅವರ ಪುತ್ರಿ ಆಶ್ರಾ ಮತ್ತು ಇಲಿಯಾಸ್ ಅವರ ಪುತ್ರಿ ಮರಿಯಮ್ ನಾಶಿಯಾ , 11 ಮತ್ತು 14 ವರ್ಷ ಪ್ರಾಯದ ಬಾಲಕಿಯರು ಮೃತರಾದವರು. ನಾವುರ ಸಂಭಂಧಿಕರ ಮನೆಗೆ ಬಂದು ನೀರಕಟ್ಟೆ ನೇತ್ರಾವತಿ ನದಿಗೆ ಸಂಜೆ ಮನೆಯವರ ಜತೆ ತೆರಳಿದ ವೇಳೆ ಈ ಘಟನೆ ನಡೆದಿದೆ.
ಶಾಲಾ ರಜೆಯ ಆನಂದವನ್ನು ಅನುಭವಿಸಲು ಮಕ್ಕಳು ನದಿ ನೀರಿಗೆ ಇಳಿಯುವುದು ಸಾಮಾನ್ಯವಾಗಿದ್ದು , ಈ ಬಗ್ಗೆ ಹೆತ್ತವರು ಗಮನ ಹರಿಸುವುದು ಅನಿವಾರ್ಯವಾಗಿದೆ . ನದಿ ನೀರಿನ ಅಪಾಯದ ಕುರಿತು ಮಕ್ಕಳಿಗೆ ತಿಳಿಸಬೇಕು ಜತೆಗೆ ಈಜು ಬಾರದವರು ಕಡ್ಡಾಯವಾಗಿ ನದಿಗೆ ಇಳಿಯದಂತೆ ನೋಡಬೇಕು. ಈಜಿನಲ್ಲಿ ನಿಪುಣರಾಗಿರುವ ಹಿರಿಯರು ಜತೆಗಿಲ್ಲದಿದ್ದರೆ ನದಿಗೆ ಕರೆದುಕೊಂಡು ಹೋಗುವ ಸಾಹಸ ಮನೆಯವರು ಮಾಡಲೇಬಾರದು ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.
To post your articles and news,please signup. This facility will be available soon. Please wait...
© www.idondusuddi.site. All Rights Reserved. Design by myweb