ದಕ್ಷಿಣ ಭಾರತದ ಯುವಕರಲ್ಲಿ ಹೆಚ್ಚುತ್ತಿರುವ ಮಧುಮೇಹ: ಅಧ್ಯಯನ

ಚೆನ್ನೈ | ರಕ್ತದಲ್ಲಿನ ಸಕ್ಕರೆಯ ಅಂಶವು ಜಾಸ್ತಿ ಆಗಿ ನಿಲ್ಲುವ ಒಂದು ಕ್ರೋನಿಕ್ ಮೆಟಬಾಲಿಕ್ ಡಿಸಾರ್ಡರ್ ಸಮಸ್ಯೆ ಆಗಿದೆ ಮಧುಮೇಹ. ದೇಹವು ಸಾಕಷ್ಟು ಇನ್ಸುಲಿನ್ ಅನ್ನು ಉತ್ಪಾದಿಸಲು ಸಾಧ್ಯವಾಗದಿದ್ದಾಗ ಅಥವಾ ಉತ್ಪತ್ತಿಯಾದ ಇನ್ಸುಲಿನ್ ಅನ್ನು ಪರಿಣಾಮಕಾರಿಯಾಗಿ ಬಳಸಲು ಸಾಧ್ಯವಾಗದೇ ಇದ್ದಾಗ ಈ ಸಮಸ್ಯೆ ಉಂಟಾಗುತ್ತದೆ, ಇದೊಂದು ದೀರ್ಘಕಾಲಿಕ ಸಮಸ್ಯೆಯಾಗಿದೆ. ಮಧುಮೇಹದಲ್ಲಿ ಎರಡು ಮುಖ್ಯ ವಿಧಗಳಿವೆ, ಟೈಪ್ 1, ಇದು ಮಕ್ಕಳು ಮತ್ತು ಯುವ ವಯಸ್ಕರಲ್ಲಿ ಕಂಡುಬರುತ್ತದೆ ಮತ್ತು ಟೈಪ್ 2, ಇದು ವಯಸ್ಕರಲ್ಲಿ ಹೆಚ್ಚು ಸಾಮಾನ್ಯವಾಗಿದೆ. ದಕ್ಷಿಣ ಭಾರತದಲ್ಲಿ ಯುವ ವಯಸ್ಕರಲ್ಲಿ ಟೈಪ್ 2 ಮಧುಮೇಹ ಹೆಚ್ಚುತ್ತಿದೆ ಎಂದು ಹೊಸ ಅಧ್ಯಯನವೊಂದು ಹೇಳುತ್ತದೆ. ಭಾರತ ಮಧುಮೇಹ ಸಂಶೋಧನಾ ಪ್ರತಿಷ್ಠಾನದ ಡಾ. ಎ.ರಾಮಚಂದ್ರನ್ ನೇತೃತ್ವದ ಅಧ್ಯಯನದಲ್ಲಿ ಈ ಅಂಶಗಳನ್ನು ಕಂಡುಹಿಡಿಯಲಾಗಿದೆ. 10 ವರ್ಷಗಳ ಅವಧಿಯಲ್ಲಿ ದಕ್ಷಿಣ ಭಾರತದಲ್ಲಿ ಹಿರಿಯ ವಯಸ್ಕರಿಗಿಂತ ಕಿರಿಯರಲ್ಲಿ ಟೈಪ್ 2 ಮಧುಮೇಹ ಹೆಚ್ಚಾಗಿದೆ ಎಂದು ಅಧ್ಯಯನ ಹೇಳಿದೆ. ಅತಿಯಾದ ಸ್ಥೂಲಕಾಯತೆ ಮತ್ತು ಕುಟುಂಬದ ಇತಿಹಾಸವು ಮಧುಮೇಹ ವ್ಯಾಪಿಸಲು ಮುಖ್ಯ ಕಾರಣಗಳು ಎಂದು ಕಂಡುಬಂದಿದೆ. 20 ರಿಂದ 39 ವರ್ಷ ವಯಸ್ಸಿನ ಯುವ ವಯಸ್ಕರು ಮತ್ತು 40 ವರ್ಷಕ್ಕಿಂತ ಮೇಲ್ಪಟ್ಟವರ ಮೇಲೆ ಅಧ್ಯಯನವನ್ನು ನಡೆಸಲಾಯಿತು. ಅಧ್ಯಯನವನ್ನು 2006-2016ರ ಅವಧಿಯಲ್ಲಿ ನಡೆಸಲಾಯಿತು. ಇದನ್ನು ಜರ್ನಲ್ ಆಫ್ ಡಯಾಬಿಟಿಸ್ ನಲ್ಲಿ ಪ್ರಕಟಿಸಲಾಗಿದೆ. ಚೆನ್ನೈ, ಕಾಂಚೀಪುರಂ ಮತ್ತು ಪನ್ರುತಿ ಎಂಬ ಮೂರು ಪ್ರದೇಶಗಳಲ್ಲಿ ನಡೆಸಿದ ಎರಡು ಸಾಂಕ್ರಾಮಿಕ ರೋಗಶಾಸ್ತ್ರದ ಸಮೀಕ್ಷೆಗಳ ಡೇಟಾವನ್ನು ಬಳಸಿಕೊಂಡು ತಂಡವು ವಿಶ್ಲೇಷಣೆ ನಡೆಸಿತು. 20-39 ವರ್ಷ ವಯಸ್ಸಿನ 7066 ಜನರು ಮತ್ತು 40 ವರ್ಷಕ್ಕಿಂತ ಮೇಲ್ಪಟ್ಟ 9,848 ಜನರು ಸಮೀಕ್ಷೆಯಲ್ಲಿ ಭಾಗವಹಿಸಿದ್ದಾರೆ. ಎರಡೂ ವಯೋಮಾನದವರಲ್ಲಿ ಮಧುಮೇಹದ ಹರಡುವಿಕೆಯು ಒಂದು ದಶಕದಲ್ಲಿ ಹೆಚ್ಚಾಗಿದೆ ಎಂದು ಅಧ್ಯಯನವು ಹೇಳಿದೆ. ಯುವ ವಯಸ್ಕರಲ್ಲಿ ಕೇವಲ 4.5% ರಷ್ಟು ಇದ್ದ ಮಧುಮೇಹವು ಕಳೆದ 10 ವರ್ಷಗಳಲ್ಲಿ 7.8% ಕ್ಕೆ ಏರಿದೆ ಅಂದರೆ 36ರಷ್ಟು ಶೇಖಡ ಹೆಚ್ಚಳವಾಗಿದೆ. 40 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ, ಮಧುಮೇಹದ ಹರಡುವಿಕೆಯು 28.4% ರಿಂದ 34% ಕ್ಕೆ ಏರಿದೆ..

image

image

ಇತರ ಚಿತ್ರಗಳು

WhatsApp

facebook

Advertisement

Market your buisiness here

Trending News

Newsletter

To post your articles and news,please signup. This facility will be available soon. Please wait...

share your favorite articles and news

ಅಪಘಾತ ಸುದ್ದಿ

Get In Touch

idondusuddi , street @ idondusuddi

+91912345678

idondusuddi@gmail.com

Follow Us
Popular News
Flickr Photos

© www.idondusuddi.site. All Rights Reserved. Design by myweb