ದಕ್ಷಿಣ ಕೊರಿಯಾ :ರೋಬೋಟ್ ಆತ್ಮಹತ್ಯೆ !, ಕೆಲಸದ ಒತ್ತಡ ಕಾರಣ ?

ಅತ್ಯಂತ ವಿಸ್ಮಯಕಾರಿ ಸುದ್ದಿಯಲ್ಲಿ, ದಕ್ಷಿಣ ಕೊರಿಯಾದ ನಾಗರಿಕ ಸೇವಕ ರೋಬೋಟ್ ಒಂದು "ಆತ್ಮಹತ್ಯೆ ಮಾಡಿಕೊಂಡಿದೆ" ,ಮೆಟ್ಟಲುಗಳ ಮೇಲಿನಿಂದ ಹಾರಿ ಯಾವುದೋ ಕಾರಣಕ್ಕೆ ಇದು ಜೀವ ಕಳೆದುಕೊಂಡಿದೆ, ಇದು ಸ್ಪಷ್ಟವಾದ ಆತ್ಮಹತ್ಯೆ ಎಂದು ಅಧಿಕಾರಿಗಳು ಹೇಳಿದ್ದಾರೆ. ದಿ ಡೈಲಿ ಮೇಲ್ ಪ್ರಕಾರ, ರೋಬೋಟ್ ಎರಡು ಮೀಟರ್ ಮೆಟ್ಟಿಲುಗಳ ಕೆಳಗೆ ಬಿದ್ದ ನಂತರ ಅದು ನಿಷ್ಕ್ರಿಯವಾಗಿದೆ ಎಂದು ಗುಮಿ ಸಿಟಿ ಕೌನ್ಸಿಲ್ ಹೇಳಿದೆ . ಮೊದಲ ರೋಬೋಟ್ ಆತ್ಮಹತ್ಯೆ ಎಂದು ಕರೆಯಲ್ಪಡುವ ಈ ಸುದ್ದಿಯನ್ನು ಕೇಳಿ ದಕ್ಷಿಣ ಕೊರಿಯಾದ ನಗರದ ಸ್ಥಳೀಯರು ಈಗ ಶೋಕ ವ್ಯಕ್ತಪಡಿಸುತ್ತಿದ್ದಾರೆ. ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ರೋಬೋಟ್ ಒಂದು ಸ್ಥಳದಲ್ಲಿ 'ಏನೋ ಇದೆ' ಎಂಬಂತೆ ತಿರುಗುತ್ತಿತ್ತು, ಆದರೆ ಪತನಕ್ಕೆ ನಿಖರವಾದ ಕಾರಣವನ್ನು ತನಿಖೆ ಮಾಡಲಾಗುತ್ತಿದೆ. "ತುಣುಕುಗಳನ್ನು ಸಂಗ್ರಹಿಸಲಾಗಿದೆ ಮತ್ತು ಕಂಪನಿಯು ಅದರ ಕಾರಣ ಕಂಡು ಹಿಡಿಯುತ್ತೆ" ಎಂದು ಅಧಿಕಾರಿ ಹೇಳಿದರು. ವರದಿಯ ಪ್ರಕಾರ, ರೋಬೋಟ್ ದೈನಂದಿನ ದಾಖಲೆಗಳ ವಿತರಣೆ, ನಗರ ಪ್ರಚಾರ ಮತ್ತು ಸ್ಥಳೀಯ ನಿವಾಸಿಗಳಿಗೆ ಮಾಹಿತಿಯನ್ನು ತಲುಪಿಸಲು ಸಹಾಯ ಮಾಡುತ್ತಿತ್ತು. "ಇದು ಅಧಿಕೃತವಾಗಿ ಸಿಟಿ ಹಾಲ್‌ನ ಒಂದು ಭಾಗವಾಗಿತ್ತು, ನಮ್ಮಲ್ಲೊಬ್ಬರಂತೆ ಕಾರ್ಯ ನಿರ್ವಹಿಸುತ್ತಿತ್ತು" ಎಂದು ಗುಮಿ ಸಿಟಿ ಕೌನ್ಸಿಲ್‌ನ ಅಧಿಕಾರಿಯೊಬ್ಬರು ಹೇಳಿದರು, ರೋಬೋಟ್ 'ಶ್ರದ್ಧೆಯಿಂದ' ಸೇವೆ ಸಲ್ಲಿಸುತ್ತಿತ್ತು. ಈ ರೀತಿಯಲ್ಲಿ ಬಳಸಲಾದ ಮೊದಲ ರೋಬೋಟ್ ಇದಾಗಿದೆ ಮತ್ತು ಇದನ್ನು ಅಕ್ಟೋಬರ್ 2023 ರಲ್ಲಿ ನೇಮಿಸಲಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ಜನರು, ರೋಬೋಟ್‌ ಆತ್ಮಹತ್ಯೆಗೆ ಕೆಲಸದ ಒತ್ತಡ ಕಾರಣ ಇರಬಹದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ಸ್ಕ್ರಾಪ್ ಮೆಟಲ್ ಶಾಂತಿಯಿಂದ ವಿಶ್ರಾಂತಿ ಪಡೆಯಲಿ ಎಂದು ನಾನು ಪ್ರಾರ್ಥಿಸುತ್ತೇನೆ." "ವಿರಾಮಗಳಿಲ್ಲ, ರಜೆಗಳಿಲ್ಲ, ಪ್ರಯೋಜನಗಳಿಲ್ಲ. ರೋಬೋಟ್‌ಗಳಿಗೆ ಒಕ್ಕೂಟದ ಅಗತ್ಯವಿದೆ" ಎಂದು Xನಲ್ಲಿ(ಟ್ವಿಟರ್) ನೆಟಿಜನ್ ಒಬ್ಬರು ಹೇಳಿದ್ದಾರೆ. ರೊಬೊಟಿಕ್ ಯಂತ್ರವನ್ನು ಕ್ಯಾಲಿಫೋರ್ನಿಯಾ ಮೂಲದ ಬೇರ್ ರೊಬೊಟಿಕ್ಸ್ ಎಂಬ ಸ್ಟಾರ್ಟಪ್ ಕಂಪೆನಿ ತಯಾರಿಸಿದೆ. ರೋಬೋಟ್ ತನ್ನದೇ ಆದ ID ಕಾರ್ಡ್ ಅನ್ನು ಹೊಂದಿತ್ತು, ಬೆಳಿಗ್ಗೆ 9 ರಿಂದ ಸಂಜೆ 4 ರವರೆಗೆ ಕೆಲಸ ಮಾಡುತ್ತಿತ್ತು.ಸಾಮಾನ್ಯವಾಗಿ ರೋಬೋಟ್'ಗಳು ಒಂದೇ ಮಹಡಿಯಲ್ಲಿ ಕೆಲಸ ಮಾಡುವಂತಹದ್ದಾದರೆ ಇದು ಇತರ ರೋಬೋಟ್‌ಗಳಿಗಿಂತ ಭಿನ್ನವಾಗಿ, ಎಲಿವೇಟರ್ ಅನ್ನು ಕರೆದು ವಿವಿಧ ಮಹಡಿಗಳಿಗೆ ಚಲಿಸಿ ಕೆಲಸ ನಿರ್ವಹಿಸುತ್ತಿತ್ತು. ವರದಿಗಳ ಪ್ರಕಾರ, ಸದ್ಯಕ್ಕೆ ಹೊಸ ರೋಬೋಟ್ ಅನ್ನು ಅಳವಡಿಸಿಕೊಳ್ಳುವ ಯಾವುದೇ ಯೋಜನೆ ಇಲ್ಲ. ಈ ಹಿಂದೆ, ಸ್ಟೀವ್ ಎಂದು ಪ್ರೀತಿಯಿಂದ ಕರೆಯಲ್ಪಡುವ ವಾಷಿಂಗ್ಟನ್ ಡಿಸಿಯ ಭದ್ರತಾ ರೋಬೋಟ್ ನೀರಿನ ಕಾರಂಜಿಯಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿತ್ತು . ಆದರೆ, "ಸಡಿಲವಾದ ಇಟ್ಟಿಗೆ ಮೇಲ್ಮೈ" ಮೇಲೆ ಸ್ಕಿಡ್ ಆಗುವುದರಿಂದ ಅಪಘಾತ ಸಂಭವಿಸಿದೆ ಎಂದು ನಂತರ ಕಂಡುಹಿಡಿಯಲಾಗಿತ್ತು..

image

image

ಇತರ ಚಿತ್ರಗಳು

WhatsApp

facebook

Advertisement

Market your buisiness here

Trending News

Newsletter

To post your articles and news,please signup. This facility will be available soon. Please wait...

share your favorite articles and news

ಅಪಘಾತ ಸುದ್ದಿ

Get In Touch

idondusuddi , street @ idondusuddi

+91912345678

idondusuddi@gmail.com

Follow Us
Popular News
Flickr Photos

© www.idondusuddi.site. All Rights Reserved. Design by myweb