ಅಹ್ಮದಾಬಾದ್: ಇತಿಹಾಸ ಪ್ರಸಿದ್ಧ ಇಮಾಂ ಶಾಹ್ ದರ್ಗಾದ ಮೇಲೆ ಇಂದು ಹಿಂದುತ್ವ ವಾದಿಗಳು ದಾಳಿ ನಡೆಸಿದ್ದಾರೆ. ಸುಮಾರು 600 ವರ್ಷಗಳ ಇತಿಹಾಸ ಇರುವ ಈ ಪ್ರಸಿದ್ಧ ದರ್ಗಾ, ಸರ್ವಧರ್ಮಗಳ ಅನುಯಾಯಿಗಳು ಗೌರವದಿಂದ ಕಾಣುತ್ತಿದ್ದು ,ಮತ ಸೌಹಾರ್ದತೆಯ ಪ್ರತೀಕದಂತೆ ಇತ್ತು.
ದರ್ಗಾದ ಗಾಜುಗಳು ಮತ್ತು ಗೋಡೆ ದಾಳಿಗೆ ಬೀಳುತ್ತಿರುವುದು ವೈರಲ್ ಆಗಿರುವ ವೀಡಿಯೋ ದೃಶ್ಯಗಳಲ್ಲಿ ಕಾಣಬಹುದು. ದರ್ಗದ ಒಳಗಡೆ ಕೇಸರಿ ಬಾವುಟ ಸ್ಥಾಪಿಸುವ ದೃಶ್ಯವೂ ಅದರಲ್ಲಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು , ಕಲ್ಲು ತೂರಾಟ ನಡೆದ ಬೆನ್ನಿಗೆ ಪೋಲೀಸರು 30 ರಷ್ಟು ಮಂದಿಯನ್ನು ಬಂಧಿಸಿದ್ದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.
Waquar Hasan
@WaqarHasan1231
In Gujarat's Ahmedabad, graves were demolished and idols were installed in 600-year-old shrine of Imam Shah Baba resulting in communal tensions and stone pelting in the area. Police have detained 30 people so far.
https://t.co/yxWOJFCIG1
.
ಗುಜರತಿನಲ್ಲಿ ಮಂಗಳವಾರ ಚುನಾವಣೆ ನಡೆದಿದ್ದಿ ಅದರ ಬೆನ್ನಿಗೇ ಇಂತಹ ಆಕ್ರಮಣ ಆತಂಕ ಹುಟ್ಟಿಸಿದೆ. ಪ್ರಾದೇಶಿಕ ಹಿಂದೂ ಮುಸ್ಲಿಮರು ಸೇರಿಕೊಂಡು ಈ ದರ್ಗಾವನ್ನು ಪರಿಪಾಲಿಸುತ್ತಿದ್ದು, ಇದನ್ನು ಹಿಂದೂ ಕ್ಷೇತ್ರ ಮಾಡಲು ಹಿಂದುತ್ವವಾದಿಗಳು ಶ್ರಮಿಸುತ್ತಿದ್ದಾರೆ ಎಂದು ಆರೋಪಿಸಿ 2022 ರಲ್ಲಿ ಮುಸ್ಲಿಂ ಸಂಘಟನೆಗಳು ಗುಜರಾತ್ ಹೈಕೋರ್ಟ್'ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರೂ ಕೋರ್ಟ್ ಅದನ್ನು ನಿರಾಕರಿಸಿತ್ತು.
To post your articles and news,please signup. This facility will be available soon. Please wait...
© www.idondusuddi.site. All Rights Reserved. Design by myweb