ನವದೆಹಲಿ | ಹರಿಯಾಣದಲ್ಲಿ ಕಾಂಗ್ರೆಸ್'ಗೆ ತಿರುಗೇಟು. ಮಾಜಿ ಸಚಿವೆ ಹಾಗೂ ಐದು ಬಾರಿ ಶಾಸಕರಾಗಿರುವ ಕಿರಣ್ ಚೌಧರಿ ಹಾಗೂ ಅವರ ಪುತ್ರಿ ಶ್ರುತಿ ಚೌಧರಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಬಿಜೆಪಿ ಕೇಂದ್ರ ಕಚೇರಿಯಲ್ಲಿ ಕೇಂದ್ರ ಸಚಿವ ಮನೋಹರಲಾಲ್ ಖಟ್ಟರ್, ಪಕ್ಷದ ಪ್ರಧಾನ ಕಾರ್ಯದರ್ಶಿ ತರುಣ್ ಚೌಗಾ, ಮುಖ್ಯಮಂತ್ರಿ ನಾಯಬ್ ಸಿಂಗ್ ಸೈನಿ ಮತ್ತು ಇತರರ ಸಮ್ಮುಖದಲ್ಲಿ ಇಬ್ಬರೂ ಪಕ್ಷದ ಸದಸ್ಯತ್ವವನ್ನು ಸ್ವೀಕರಿಸಿದರು.
ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳಿರುವಾಗ ಹಿರಿಯ ಮಹಿಳಾ ನಾಯಕಿಯ ಪಕ್ಷಾಂತರ ಕಾಂಗ್ರೆಸ್'ಗೆ ಹಿನ್ನಡೆಯಾಗಿದೆ. ಕಿರಣ್ ಚೌಧರಿ ಹರಿಯಾಣದಲ್ಲಿ ಕಾಂಗ್ರೆಸ್‌ನ ಹಿರಿಯ ಮಹಿಳಾ ಮುಖವಾಗಿದ್ದರು. 69 ವರ್ಷದ ಕಿರಣ್ ಚೌಧರಿ ಅವರು ತೋಷಮ್‌ನಿಂದ ಐದು ಬಾರಿ ಶಾಸಕರಾಗಿದ್ದರು ಮತ್ತು ಮಾಜಿ ಕ್ಯಾಬಿನೆಟ್ ಸಚಿವರಾಗಿದ್ದರು. ಅವರ ಪುತ್ರಿ ಶ್ರುತಿ ಚೌಧರಿ ಹರಿಯಾಣ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷೆಯಾಗಿದ್ದರು.
ಕಿರಣ್ ಚೌಧರಿ ಮತ್ತು ಶ್ರುತಿ ನಿನ್ನೆ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದರು. ಕಳೆದ ಲೋಕಸಭೆ ಚುನಾವಣೆಯಲ್ಲಿ ಶ್ರುತಿ ಚೌಧರಿ ಅವರಿಗೆ ಸ್ಥಾನ ಸಿಗದ ಅಸಮಾಧಾನ ಹಾಗೂ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಹಾಗೂ ಕಾಂಗ್ರೆಸ್ ರಾಜ್ಯ ನಾಯಕತ್ವದ ಜತೆಗಿನ ಭಿನ್ನಾಭಿಪ್ರಾಯದಿಂದ ಅವರಿಬ್ಬರ ರಾಜೀನಾಮೆಗೆ ಕಾರಣ ಎಂಬುದು ತಿಳಿದುಬಂದಿದೆ..
To post your articles and news,please signup. This facility will be available soon. Please wait...
© www.idondusuddi.site. All Rights Reserved. Design by myweb