ಮುಂಬೈ: ಕಳೆದ ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ ಅಟಲ್ ಸೇತು ಹೆಸರಿನ ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ (MTHL) ನ ಅಪ್ರೋಚ್ ರಾಂಪ್‌ನಲ್ಲಿ ಬಿರುಕು ಕಾಣಿಸಿಕೊಂಡಿದೆ. ಇದು ದೇಶದ ಅತಿ ಉದ್ದದ ಸಮುದ್ರ ಸೇತುವೆಯಾಗಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಗೌರವಾರ್ಥವಾಗಿ ಈ ಸೇತುವೆಗೆ ಅಟಲ್ ಸೇತು ಎಂಬ ಹೆಸರನ್ನು ಇಡಲಾಗಿತ್ತು.
ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನಾನಾ ಪಟೋಲೆ ಅವರು ಸಮುದ್ರ ಸೇತುವೆ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದ್ದು, ಸೇತುವೆಯಲ್ಲಿ ಬಿರುಕು ಉಂಟಾಗಿದೆ ಎಂದು ಆರೋಪಿಸಿದ್ದರು. ಇದೀಗ ಮುಂಬೈ ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಈ ಬಗ್ಗೆ ಖಚಿತಪಡಿಸಿದೆ.
ಸೇತುವೆಯನ್ನು ಪರಿಶೀಲಿಸಿದ ಪಟೋಳೆ, ಸೇತುವೆಯ ನಿರ್ಮಾಣ ಸರಿಯಾಗಿಲ್ಲ ಮತ್ತು ಗುಣಮಟ್ಟದಿಂದ ಕೂಡಿಲ್ಲ ಮತ್ತು ರಸ್ತೆಯ ಒಂದು ಭಾಗವು ಸುಮಾರು ಒಂದು ಅಡಿಯಷ್ಟು ಬಿದ್ದಿದೆ ಎಂದೂ, ಈ ಸೇತುವೆಯನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ದು, ಉದ್ಘಾಟನೆಗೊಂಡ ತಿಂಗಳಲ್ಲೇ ಬಿರುಕು ಮೂಡಿದ್ದು. ಇದು ಸಂಪೂರ್ಣ ಭ್ರಷ್ಟಾಚಾರ. ಸರ್ಕಾರಕ್ಕೆ ಜನಜೀವನದ ಬಗ್ಗೆ ಕಾಳಜಿ ಇಲ್ಲ ಎಂಬುದಕ್ಕೆ ಇದು ದೊಡ್ಡ ಸೂಚನೆಯಾಗಿದೆ' ಎಂದು ಪಟೋಲೆ ಹೇಳಿದರು.
ಆದರೆ, ಆಡಳಿತಾರೂಢ ಬಿಜೆಪಿ ಮತ್ತು ಯೋಜನೆಯ ನೋಡಲ್ ಏಜೆನ್ಸಿಯಾದ ಎಂಎಂಆರ್‌ಡಿಎ, ಯೋಜನೆಯಲ್ಲಿನ ರಚನಾತ್ಮಕ ದೋಷಗಳಿಂದ ಬಿರುಕುಗಳು ಉಂಟಾಗಿಲ್ಲ ಮತ್ತು ಸೇತುವೆಯ ಭದ್ರತೆಗೆ ಯಾವುದೇ ಅಪಾಯವಿಲ್ಲ ಎಂದು ಹೇಳಿಕೆ ನೀಡಿವೆ. ಕಾಂಗ್ರೆಸ್ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ , ಅಟಲ್ ಸೇತುವೆಯಲ್ಲಿ ಬಿರುಕುಗಳು ಕಂಡುಬಂದಿಲ್ಲ ಆದರೆ ಸೇತುವೆಗೆ ಹೋಗುವ ರಸ್ತೆಯಲ್ಲಿಯಾಗಿದೆ ಬಿರುಕಿಗಳು ಕಂಡುಬಂದದ್ದು. ಎಂಎಂಆರ್‌ಡಿಎ ಗುತ್ತಿಗೆದಾರರು ಈಗಾಗಲೇ ದುರಸ್ತಿ ಆರಂಭಿಸಿದ್ದು, 24 ಗಂಟೆಯೊಳಗೆ ದುರಸ್ತಿ ಪೂರ್ಣಗೊಳ್ಳಲಿದೆ. ಸಂಚಾರಕ್ಕೆ ಅಡ್ಡಿಯಾಗದಂತೆ ಈ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು..
ಮುಂಬೈ ಟ್ರಾನ್ಸ್‌ಹಾರ್ಬರ್ ಲಿಂಕ್ ಎಂದೂ ಕರೆಯಲ್ಪಡುವ ಅಟಲ್ ಸೇತು ದಕ್ಷಿಣ ಮುಂಬೈಯನ್ನು ನವಿ ಮುಂಬೈಗೆ ಸಂಪರ್ಕಿಸುವ ಸೇತುವೆಯಾಗಿದೆ. ಈ ವರ್ಷದ ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದರು. 17,840 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಷಟ್ಪಥ ಸೇತುವೆ 21.8 ಕಿ.ಮೀ ಉದ್ದವಿದೆ. ಇದು ಭಾರತದ ಅತ್ಯಂತ ಉದ್ದದ ಸೇತುವೆ ಎಂದು ಗುರುತಿಸಲ್ಪಟ್ಟಿದೆ.
To post your articles and news,please signup. This facility will be available soon. Please wait...
© www.idondusuddi.site. All Rights Reserved. Design by myweb