ಕೋಝಿಕ್ಕೋಡ್ : ಇಲ್ಲಿನ ಮರ್ಕಝ್ ನಾಲೆಜ್ ಸಿಟಿಯಲ್ಲಿ ರಮಳಾನ್ 17 ರಂದು ನಡೆಯುವ "ಬದ್ರುಲ್ ಖುಬ್ರಾ" ವಾರ್ಷಿಕ ಬದ್ರ್ ಅನುಸ್ಮರಣೆ ಮತ್ತು ಗ್ರಾಂಡ್ ಇಫ್ತಾರ್ ಕಾರ್ಯಕ್ರಮಕ್ಕೆ ಭಾರೀ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸುವ ನಿರೀಕ್ಷೆ ಇದೆ. ಕಳೆದ ವರ್ಷ ಇದೇ ದಿನ ದಾಖಲೆ ಸಂಖ್ಯೆಯ ಜನ ಜಂಗುಳಿ ಭಾಗವಹಿಸಿದ ಇಫ್ತಾರ್ ಕೂಟ ಐತಿಹಾಸಿಕವಾಗಿತ್ತು. ನಾಳೆ ನಡೆಯುವ ಬೃಹತ್ ಇಫ್ತಾರ್ ಸಂಗಮಕ್ಕೆ ವಿವಿಧ ಊರುಗಳಿಂದ ಬಂದ 313 ಆಡುಗಳನ್ನು ಇಂದು ಜಾಥಾ ಮೂಲಕ ಸ್ವೀಕರಿಸಲಾಯಿತು. ವೈಯಕ್ತಿಕವಾಗಿಯೂ ಸಂಘಟಿತವಾಗಿಯೂ ಜನರು ಇಫ್ತಾರ್ ಆಹಾರ ಪದಾರ್ಥಗಳಿಗಾಗಿ ಆಡುಗಳನ್ನು ದಾನ ಮಾಡಿದ್ದಾರೆ..
ರಮಳಾನ್ 17 ವಿಶ್ವ ಮುಸಲ್ಮಾನರಿಗೆ ವಿಶೇಷ ದಿನ. ಎಂದಿಗೂ ಮನಸ್ಸಿನಲ್ಲಿ ಪ್ರತ್ಯೇಕ ಶಕ್ತಿ ಮತ್ತು ಧೈರ್ಯ ನೀಡುವ ದಿನ. ಸತ್ಯ ಮತ್ತು ಅಸತ್ಯ ಬೇರ್ಪಟ್ಟ ದಿನ. ಐತಿಹಾಸಿಕ ಬದ್ರ್ ಯುದ್ದ ನಡೆದ ದಿನ. ಇದರ ಸ್ಮರಣಾರ್ಥವಾಗಿ ಎಲ್ಲ ಮಸೀದಿಗಳಲ್ಲಿಯೂ ಆಧ್ಯಾತ್ಮಿಕ ಸಂಗಮ ನಡೆಯುತ್ತದೆ. ಅದರಂತೆ ಮರ್ಕಝ್ ನಾಲೆಜ್ ಸಿಟಿ ಜಾಮಿಉಲ್ ಫುತೂಹ್'ನಲ್ಲಿ ನಾಳೆ ಮಧ್ಯಾಹ್ನ ದಿಂದ ವಿವಿದ ಕಾರ್ಯಕ್ರಮಗಳು ಆರಂಭವಾಗುತ್ತದೆ. ಬೃಹತ್ ಇಫ್ತಾರ್ , ಬದ್ರುಲ್ ಖುಬ್ರಾ ಸಂಗಮ ಅದರ ಭಾಗವಾಗಿದೆ
ಈ ಕಾರ್ಯಕ್ರಮಕ್ಕೆ ಎಲ್ಲ ವಿಶ್ವಾಸಿಗಳನ್ನು ಮರ್ಕಝ್ ಅಧಿಕೃತರು ಆಹ್ವಾನಿಸಿದ್ದಾರೆ.
To post your articles and news,please signup. This facility will be available soon. Please wait...
© www.idondusuddi.site. All Rights Reserved. Design by myweb