ಅರೀಕ್ಕೋಡ್ : ಪ್ರಾಯ ಕೇವಲ ಸಂಖ್ಯೆ ಮಾತ್ರ , ಇಚ್ಛಾಶಕ್ತಿ ಇದ್ದರೆ ಸಾಧನೆಗೆ ವಯಸ್ಸಿನ ಅಡ್ಡಿಯಿಲ್ಲ .ಮಗಳು ಫಾತಿಮ ಸನಿಯ್ಯಾ ಜತೆಗೆ ಮೆಡಿಕಲ್ ಪ್ರವೇಶ ಪರೀಕ್ಷೆ ನೀಟ್ ಬರೆದ ತಂದೆ ಮುಹಮ್ಮದಲಿ ಸಖಾಫಿ . ಮೂವತ್ತು ವರ್ಷಗಳ ಹಿಂದೆ ಎಸ್ಸೆಸ್ಸೆಲ್'ಸಿ ನಂತರ ಪ್ರೀ ಡಿಗ್ರಿ ಮುಗಿಸಿ ಕ್ಯಾಲಿಕಟ್ ಮರ್ಕಝ್ ಸೇರಿದ ಮುಹಮ್ಮದಲಿ ಧಾರ್ಮಿಕ ಅಧ್ಯಯನದಲ್ಲಿ ಸಖಾಫಿ ಜತೆಗೆ ಕ್ಯಾಲಿಕಟ್ ಯುನಿವರ್ಸಿಟಿಯಿಂದ ಡಿಗ್ರಿಯನ್ನು ಪಡೆದಿದ್ದರು. ಆದರೆ ಅವರ ಬಹುಕಾಲದ ಆಗ್ರಹವಾಗಿತ್ತು ನೀಟ್ ಬರೆದು ಮೆಡಿಕಲ್ ಫೀಲ್ಡ್'ನಲ್ಲಿ ಸಾಧನೆ ಮಾಡಬೇಕು ಎಂಬುದು. ಮಗಳು ಫಾತಿಮ ಸನಿಯ್ಯಾ ಹೈಯರ್ ಸೆಕೆಂಡರಿ ಮುಗಿಸಿ ನೀಟ್'ಗೆ ಸಿದ್ಧತೆಗಳನ್ನು ಆರಂಭಿಸಿದಾಗ ತಂದೆ ಮುಹಮ್ಮದಲಿ ಸಖಾಫಿಗೂ ಸಿದ್ಧತೆಗಳನ್ನು ಮಾಡಲು ತುಸು ಸುಲಭ ಅವಕಾಶ ಲಭಿಸಿತು. ಮಗಳ ಜತೆಗೆ ಪಾಠ್ಯ ವಿಷಯಗಳು ಚರ್ಚಿಸಿ ಕಲಿಯಬಹುದು ಎಂದು ತೀರ್ಮಾನಿಸಿ ಈ ವರ್ಷ ಮಗಳ ಜತೆಯೇ ಪರೀಕ್ಷೆ ಬರೆಯುವ ತೀರ್ಮಾನಕ್ಕೆ ಬಂದರು..
ಈ ಮೊದಲು ಪಡೆದ ಪ್ರೀ ಡಿಗ್ರಿ ಬೇರೆಯೇ ಸ್ಟ್ರೀಮ್ ಆದ್ದರಿಂದ ನೀಟ್'ಗೆ ಅರ್ಹತೆ ಲಭಿಸಲು ಕಳೆದ ವರ್ಷ ಮತ್ತೆ ಸಯನ್ಸ್ ವಿಭಾಗದಲ್ಲಿ ಹಯ್ಯರ್ ಸೆಕಂಡರಿ ಪ್ಲಸ್ ಟು ಪರೀಕ್ಷೆ ಬರೆದಿದ್ದರು. ನೀಟ್'ಗಾಗಿ ಪ್ರತ್ಯೇಕ ಕೋಚಿಂಗ್ ಪಡೆಯಲು ಆರ್ಥಿಕವಾಗಿ ಸಧೃಡವಲ್ಲದ ಕುಟುಂಬ, ಮಗಳು ಮನೆಯಿಂದಲೇ ಕಲಿತರೆ ತಂದೆ ಉದ್ಯೋಗ ಸ್ಥಳದಿಂದ ನೀಟ್'ಗಾಗಿ ಸಿದ್ದತೆ ಮಾಡಿದ್ದರು. ಕ್ಷುಲ್ಲಕ ಕಾರಣಕ್ಕೆ ಕಲಿಕೆಯಿಂದ ಹಿಂದೆ ಸರಿಯುವ ವಿಧ್ಯಾರ್ಥಿಗಳ ನಡುವೆ ಇವರು ಮಾದರಿ ಮತ್ತು ಕಲಿಯುವ ವಿಧ್ಯಾರ್ಥಿಗಳಿಗೆ ಪ್ರಚೋದನೆ ಆಗಿದ್ದಾರೆ.
SSF ಅರೀಕ್ಕೋಡ್ ಡಿವಿಷನ್'ನ ಮಾಜಿ ಅಧ್ಯಕ್ಷರಾಗಿದ್ದ ಮುಹಮ್ಮದಲಿ ಸಖಾಫಿ ಇದೀಗ IPF ಅರೀಕ್ಕೋಡ್ ಚಾಪ್ಟರ್ ಸೆಕ್ರೆಟ್ರಿಯೇಟ್ ಸದಸ್ಯರಾಗಿದ್ದಾರೆ
To post your articles and news,please signup. This facility will be available soon. Please wait...
© www.idondusuddi.site. All Rights Reserved. Design by myweb