ತಾಯಂದಿರ ಹೆಸರಿನಲ್ಲಿ ನೂರು ಕೋಟಿ ಚಾರಿಟಿ ಪದ್ದತಿ ಘೋಷಿಸಿದ ಶೈಖ್ ಮುಹಮ್ಮದ್ ಬಿನ್ ರಾಶಿದ್

ದುಬೈ : ವೈಸ್ ಪ್ರೆಸಿಡೆಂಟ್, ಪ್ರಧಾನಮಂತ್ರಿ ಮತ್ತು ದುಬೈ ಆಡಳಿತಾಧಿಕಾರಿ ಆಗಿರುವ ಗೌರವಾನ್ವಿತ ಶೈಕ್ ಮುಹಮ್ಮದ್‌ ರಾಶಿದ್ ಅಲ್ ಮಕ್ತೂಮ್ ಅವರು ತಾಯಂದಿರ ಚಾರಿಟಿ ಪದ್ದತಿ ಘೋಷಿಸಿದ್ದು, ಯುಎಇ ಅಲ್ಲಿರುವ ತಾಯಂದಿರ ಗೌರವಾರ್ಥವಾಗಿ ಸ್ಥಾಪಿಸಲು ಉದ್ದೇಶಿಸಿದ ಈ ಪದ್ದತಿಯಲ್ಲಿ ಒಂದು ಬಿಲಿಯನ್ AED( ನೂರು ಕೋಟಿ) ಮೊತ್ತದ ಫಂಡ್‌ ಅನ್ನು ವಿಶ್ವದಾದ್ಯಂತ ಲಕ್ಷಾಂತರ ಜನರ ಶಿಕ್ಷಣಕ್ಕೆ ಸಹಕಾರ ನೀಡಲು ಉದ್ದೇಶಿಸಲಾಗಿದೆ. ಪವಿತ್ರ ರಮಳಾನ್ ತಿಂಗಳ ಆಗಮನಕ್ಕೆ ಕೆಲವೇ ದಿನಗಳ ಅಂತರದಲ್ಲಿ ಘೋಷಣೆಯಾದ ಈ ಪದ್ದತಿಯು , ತಾಯಂದಿರು ಮಕ್ಕಳ ಮೊದಲ ಶಿಕ್ಷಕರು ಎಂಬ ವಾಸ್ತವವನ್ನು ಮನಗಂಡು ತಾಯಿಯ ಹೆಸರಿನಲ್ಲಿ ದಾನವನ್ನು ನೀಡಲು ಪ್ರತಿಯೊಬ್ಬರಿಗೂ ಅವಕಾಶವನ್ನು ನೀಡುತ್ತದೆ. ಕೆಳಮಟ್ಟದ ಜನಾಂಗದ ಮತ್ತು ಒಟ್ಟು ಶಿಕ್ಷಣ ವಂಚಿತ ಜನರ ಶಿಕ್ಷಣಕ್ಕಾಗಿ ಮತ್ತು ಅವರ ಜೀವನ ಮಟ್ಟವನ್ನು ಉತ್ತಮಗೊಳಿಸಲು ಮತ್ತು ಉದ್ಯೋಗ ಅವಕಾಶ ಪಡೆಯಲು ಈ ಫಂಡನ್ನು ಉಪಯೋಗಿಸಲಾಗುತ್ತದೆ..

ಪ್ರತೀ ವರ್ಷವೂ ರಮಳಾನ್ ತಿಂಗಳಲ್ಲಿ ನಡೆಯುವ ಚಾರಿಟಿ ಪದ್ದತಿಯ ಮುಂದುವರಿದ ಭಾಗವಾಗಿದೆ ಇದು...

image

'X' ನಲ್ಲಿ ಈ ಕುರಿತು ಪೋಸ್ಟ್ ಮಾಡಿದ ಶೈಖ್ ಮುಹಮ್ಮದ್ , " ಪ್ರೀತಿಯ ಸಹೋದರ ಸಹೋದರಿಯರೆ, ಪವಿತ್ರ ರಮಳಾನ್ ತಿಂಗಳು ಆಗಮನವಾಗುತ್ತಿದೆ, ಯುವೆಇ ಇಂದ ವಿಶ್ವಕ್ಕೆ ಪ್ರತಿವರ್ಷ ಮಾನವೀಯ ಸೇವೆಯನ್ನು ನೀಡುವುದು ನಮ್ಮ ಪರಂಪರೆಯಾಗಿದೆ, ಇವತ್ತು ನಾವು ಶಿಕ್ಷಣಕ್ಕಾಗಿ ತಾಯಂದಿರ ಹೆಸರಿನಲ್ಲಿ ನೂರು ಕೋಟಿ ಚಾರಿಟಿ Mother's Endowment ಪದ್ದತಿಯನ್ನು ಘೋಷಿಸುತ್ತಿದ್ದೇವೆ" ಎಂಬ ಸಂದೇಶವನ್ನು ಪ್ರಕಟಿಸಿದ್ದಾರೆ.

image

ಪವಿತ್ರ ಖುರಾನಿನ ಮಾನವೀಯ ಸಂದೇಶಗಳಿಂದ ಪ್ರೇರಿತವಾಗಿ , ಯುಎಇ ನಡೆಸುತ್ತಿರುವ ಈ ಪದ್ದತಿಯು ಮಾನವೀಯ ಸೇವೆಯಲ್ಲಿ ಯುಎಇ ಯ ಕೊಡುಗೆಯನ್ನು ಮತ್ತಷ್ಟು ಬಲಪಡಿಸುತ್ತದೆ. ಕಳೆದ ರಮಳಾನ್ ತಿಂಗಳಲ್ಲಿ MBRGI ನಡೆಸಿದ ಕ್ಯಾಂಪೇನ್'ನ ಮುಂದುವದಿದ ಭಾಗವಾಗಿ ಈ ಪದ್ದತಿ ಮುಂದುವರಿಯುತ್ತದೆ. ಕಳೆದ ಬಾರಿ ನಿರೀಕ್ಷೆಗೂ ಮೀರಿ ಸಹಾಯ ಸಹಕಾರ ನೀಡಲು ಮತ್ತು ಪಡೆಯಲು ಸಾಧ್ಯವಾಗಿದೆ ಎಂದು ಸೆಕ್ರೆಟರಿ ಜನರಲ್ ಆಫ್ ರಾಶಿದ್ ಅಲ್ ಮಕ್ತೂಮ್ ಅಲ್ ಗೆರ್'ಗಾವಿ ಹೇಳಿದ್ದಾರೆ.

ಇತರ ಚಿತ್ರಗಳು

WhatsApp

facebook

Advertisement

Market your buisiness here

Trending News

Newsletter

To post your articles and news,please signup. This facility will be available soon. Please wait...

share your favorite articles and news

ಅಪಘಾತ ಸುದ್ದಿ

Get In Touch

idondusuddi , street @ idondusuddi

+91912345678

idondusuddi@gmail.com

Follow Us
Popular News
Flickr Photos

© www.idondusuddi.site. All Rights Reserved. Design by myweb