ಪುತ್ತೂರು:- ಫೀರ್ ಮುಅಲ್ಲಾ ಜುಮಾ ಮಸೀದಿ ಕೂರ್ನಡ್ಕ ಪುತ್ತೂರಿನಲ್ಲಿ 8 ದಿವಸಗಳ ಧಾರ್ಮಿಕ ಕಾರ್ಯಕ್ರಮದ ಕೊನೆಯ ದಿನವಾದ ನಿನ್ನೆ ಹಾಫಿಳ್ ಸಿರಾಜುದ್ದೀನ್ ಖಾಸಿಮಿ ಉಸ್ತಾದ್ ಪತ್ತನಾಪುರಮ್ ಕೇರಳರವರ ಮತ ಪ್ರಭಾಷಣ ಕಾರ್ಯಕ್ರಮವಿತ್ತು.. ಕೊನೆಯಲ್ಲಿ ಸಿರಾಜುದ್ದೀನ್ ಖಾಸಿಮಿ ಉಸ್ತಾದರಿಗೆ ನಶೀದಾ ಎಂಬ ಸಹೋದರಿಯು ತಾನು ಕೈಯಲ್ಲಿ ರಚಿಸಿದ ಅರೇಬಿಕ್ ಕ್ಯಾಲಿಗ್ರಫಿಯೊಂದನ್ನು ತನ್ನ ಅಜ್ಜನ ಮುಖಾಂತರ ಉಸ್ತಾದರಿಗೆ ಉಡುಗೊರೆಯಾಗಿ ನೀಡಿದ್ದಳು.. ಉಸ್ತಾದರು ಅದನ್ನು ಅಲ್ಲಿಯೆ ಹರಾಜಿಗಿಟ್ಟರು
(ಏಲಮ್) ಮೂಲ ಬೆಲೆ ಸಾವಿರ ರೂಪಾಯಿಯಾಗಿತ್ತು ಆದರೆ ಆ ಕ್ಯಾಲಿಗ್ರಫಿಯೂ ಬರೋಬ್ಬರಿ ಇಪ್ಪತ್ತು ಲಕ್ಷದ ಮುನ್ನೂರ ಹದಿಮೂರು ರೂಪಾಯಿಗೆ ಹರಾಜಾಯಿತು..
.
ಬಶೀರ್,ಸಿರಾಜ್,ಸಿದ್ದೀಖ್ ಘಟಾನುಘಟಿಗಳಾದ ಈ ಮೂವರು ಕೊನೆಯವರೆಗೂ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಕೊನೆಯಲ್ಲಿ ಈ ಕ್ಯಾಲಿಗ್ರಫಿ ಇಪ್ಪತ್ತು ಲಕ್ಷದ ಮುನ್ನೂರ ಹದಿಮೂರು ರೂಪಾಯಿಗೆ ಬಶೀರ್ ರವರ ಪಾಲಾಯಿತು.. ಈ ಮೊತ್ತವನ್ನು ಕೂರ್ನಡ್ಕ ಮೊಹಲ್ಲಾದಲ್ಲಿ ಮಹಿಳಾ ಶಿಕ್ಷಣಿಕ ಅಭಿವೃದ್ಧಿ ಕಾರ್ಯಕ್ರಮಕ್ಕೆ ವಿನಯೋಗಿಸಲಾಗುವುದು ಎಂದು ಅಂದಾಜಿಸಲಾಗಿದೆ.
To post your articles and news,please signup. This facility will be available soon. Please wait...
© www.idondusuddi.site. All Rights Reserved. Design by myweb