U.S News : ಫೆಲಸ್ತೀನ್ ವಿರುದ್ಧ ಇಸ್ರೇಲ್ ನಡೆಸುತ್ತಿರುವ ನರಮೇಧವನ್ನು ಖಂಡಿಸಿ ವಾಶಿಂಗ್ಟನ್ ಇಸ್ರೇಲ್ ಎಂಬೆಸ್ಸಿ ಹೊರಗಡೆ ಪ್ರತಿಭಟನಾ ನಿರತನಾಗಿದ್ದ ವಾಯುಪಡೆ ಸದಸ್ಯ "ಫ್ರೀ ಫೆಲಸ್ತೀನ್" ಎಂಬ ಘೋಷಣೆ ಕೂಗುತ್ತಾ ತನ್ನ ಕೈಯಲ್ಲಿದ್ದ ಬಾಟಲ್'ನಿಂದ ಪೆಟ್ರೋಲ್ ಅನ್ನು ಶರೀರಕ್ಕೆ ಸುರಿದು ಬೆಂಕಿ ಹಚ್ಚುವ ದೃಶ್ಯ ವೀಡಿಯೋ ವೈರಲ್ ಆಗಿತ್ತು. ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರೂ ತೀವ್ರ ಸ್ವರೂಪದ ಲ್ಲಿ ಗಾಯಗೊಂಡಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಮೃತರಾಗಿದ್ದಾಗಿ ಮೂಲಗಳು ತಿಳಿಸಿದೆ.
ಮೃತ ವಾಯುಪಡೆ ಸದಸ್ಯನನ್ನು 25 ವರ್ಷ ಪ್ರಾಯದ ಆರನ್ ಬಶ್'ನೆಲ್ ಎಂದು ಪೋಲೀಸರು ಗುರುತಿಸಿದ್ದಾರೆ. ಲೈವ್ ಸ್ಟ್ರೀಮಿಂಗಿನಲ್ಲಿ ಬಂದ ಬಶ್'ನೆಲ್ , ಇಸ್ರೇಲ್ ಫೆಲಸ್ತೀನ್ ವಿರುದ್ಧ ನಡೆಸುತ್ತಿರುವುದು ನರಮೇಧ ಎಂದು ಒತ್ತಿ ಹೇಳುತ್ತಾರೆ ಮತ್ತು ತಾನು ಈಗ ಮಾಡುತ್ತಿರುವುದು ಫೆಲಸ್ತೀನಿಯನ್ನರ ನರಳುವಿಕೆಗೆ ಹೋಲಿಸಿದರೆ ದೊಡ್ಡ ವಿಷಯವಲ್ಲ ಎಂದು ಹೇಳಿದ್ದಾರೆ.
ಬಶ್'ನೆಲ್ ವೃತ್ತಿಯಲ್ಲಿ ಸಾಫ್ಟ್‌ವೇರ್ ಆಸಕ್ತನಾಗಿದ್ದು , ತನ್ನ ಸಾಮಾಜಿಕ ತಾಣದಲ್ಲಿ ನಿರಂತರವಾಗಿ ಇಸ್ರೇಲ್ ಕ್ರೂರತೆಯ ವಿರುದ್ಧ ಜಾಗೃತಿ ಮೂಡಿಸುತ್ತಿದ್ದರು. ಇಸ್ರೇಲ್-ಫೆಲಸ್ತೀನ್ ಏಕಪಕ್ಷೀಯ ಆಕ್ರಮಣ ಇದೀಗ ನಾಲ್ಕು ತಿಂಗಳು ತುಂಬುತ್ತಿದೆ
To post your articles and news,please signup. This facility will be available soon. Please wait...
© www.idondusuddi.site. All Rights Reserved. Design by myweb