📝 ಸಿದ್ದೀಕ್ ಜಾರಿಗೆಬೈಲ್ ||
ಹೌದು,
ಬದುಕಲ್ಲಿ ತ್ಯಾಗ, ಪರಿಶ್ರಮವಿದ್ದರೆ, ಕನಸಲ್ಲೂ ಘಟಿಸದ ಕೆಲವೊಂದು ಮಿರಾಕಲ್ ನಡೆಯುತ್ತದೆ, ಎಂಬುವುದಕ್ಕೆ ಇವನ ಸಾಧನೆಯೇ ಉತ್ತಮ ನಿದರ್ಶನ.
ಬಾಲ್ಯದ ದಿನಗಳಲ್ಲಿ ಒಂದೇ ಬೆಂಚಿನಲ್ಲಿ ಕುಳಿತು ಮದರಸ ತರಗತಿ ಆಲಿಸಿದ ಗೆಳೆಯ *ಸಫ್ವಾನ್* ಈಗ ಡಾಕ್ಟರ್ !
ಮಾಷಾ ಅಲ್ಲಾಹ್...😍
ಬೆಳ್ತಂಗಡಿ ತಾಲೂಕಿನ ಜಾರಿಗೆಬೈಲು ನಿವಾಸಿಯಾದ, ಊರಿನ ಮಸೀದಿಯ ಕೋಶಾಧಿಕಾರಿಯಾಗಿ, ಊರಿನ ಎಲ್ಲಾ ದೀನೀ ಕಾರ್ಯಕ್ರಮಗಳಲ್ಲೂ ಸಕ್ರೀಯರಾಗಿದ್ದ ನಿವೃತ್ತ ಮೆಸ್ಕಾಂ ಸಿಬ್ಬಂದಿ ಹಮೀದ್ ರವರ ಮಗ.
ದೇರಳಕಟ್ಟೆಯ ಕಣಚೂರು ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ವಿಭಾಗದ *MBBS* ಪದವಿಯನ್ನು ಪಡೆದಿದ್ದಾನೆ.
ಗೆಳೆಯನ ಈ ಸಾಧನೆ ಊರಿಗೆ ಹೆಮ್ಮೆ, ಕುಟುಂಬಕ್ಕೆ ಗೌರವ, ಸ್ನೇಹಿತರಾದ ನಮಗೆ ವಿಶೇಷ ಅಭಿಮಾನ.
ನಮ್ಮೂರಿನ ಮೊದಲ ಡಾಕ್ಟರ್ ಎಂಬ ಹೆಗ್ಗಳಿಕೆ ಈತನಿಗೆ ಸಲ್ಲುತ್ತದೆ.
ಸಾಧಾರಣ ಕುಟುಂಬದಿಂದ ಬಂದ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಏನಾದರೂ ಸಾಧಿಸಬೇಕು ಎಂಬ ಮನಸ್ಸಿದ್ದರೂ, ಇಂದಿನ ಕಮರ್ಷಿಯಲ್ ಯುಗದಲ್ಲಿ ಅದು ಸುಲಭದ ಮಾತಲ್ಲ.
ಆದರೂ, ಸೃಷ್ಟಿಕರ್ತನ ಅನುಗ್ರಹದಿಂದ, ತಂದೆ ತಾಯಿಯ ದುಆ ದ ಫಲವಾಗಿ, ಸಫ್ವಾನ್ ಬಾಲ್ಯದ ಕನಸನ್ನು ನನಸು ಮಾಡಿಕೊಂಡಿದ್ದಾನೆ.
ಸಫ್ವಾನ್ ಬಾಲ್ಯದಲ್ಲಿಯೇ ಸ್ಮಾರ್ಟ್, ಪ್ರತಿಭಾವಂತ, ಜ್ಞಾನದಾಹಿ. ಕಲಿಯುವುದರಲ್ಲಿ ಆಸಕ್ತಿ ಜಾಸ್ತಿ. ಹೊಸ ವಿಷಯವನ್ನು ತಟ್ಟನೆ ಗ್ರಹಿಸುವ ಸಾಮರ್ಥ್ಯ ಅವನಲ್ಲಿತ್ತು. ಉನ್ನತ ವಿದ್ಯಾಭಾಸಕ್ಕಾಗಿ ದೂರದೂರಿಗೆ ತೆರಳಿದ ಬಳಿಕ ಅಷ್ಟೇನು ಸಂಪರ್ಕವಿರಲಿಲ್ಲ. ಏನೇ ಇರಲಿ, ಅಧ್ಯಯನದ ವಿಷಯದಲ್ಲಿ ಅವನ ಕಠಿಣ ಪರಿಶ್ರಮಕ್ಕೆ ಸರ್ವೋನ್ನತನು ಉತ್ತಮವಾದ ಫಲಿತಾಂಶವನ್ನೇ ನೀಡಿರುತ್ತಾನೆ. ಅಲ್‌ಹಮ್ದುಲಿಲ್ಲಾಹ್.
ಗೆಳೆಯನ ಸಾಧನೆಗೆ ಹೃದಯಸ್ಪರ್ಶಿ ಅಭಿನಂದನೆಗಳು. ನಿಸ್ವಾರ್ಥ ಮನೋಭಾವದಿಂದ ಸಮಾಜದ ಅಶಕ್ತ ರೋಗಿಗಳಿಗೆ ಭರವಸೆಯಾಗಿ, ಸಾಮುದಾಯಿಕ ಸೇವೆಯಲ್ಲಿ ನಿರತನಾಗಲು ತೌಫೀಖ್ ನೀಡಲಿ. ಭವಿಷ್ಯತ್ತಿನಲ್ಲಿ ಸಾಧನೆಗಳ ಸಂಭ್ರಮ ಮುಂದುವರಿಯಲಿ ಎಂಬ ಶುಭ ಹಾರೈಕೆ. Congratulations & Best Wishes Brother 🫶👏 ~ *ಸಿದ್ದೀಕ್ ಜಾರಿಗೆಬೈಲು* 9964591734 (WhatsApp Only)
To post your articles and news,please signup. This facility will be available soon. Please wait...
© www.idondusuddi.site. All Rights Reserved. Design by myweb