ಕೋಝಿಕ್ಕೋಡ್:- UPSC 2024 ಪರೀಕ್ಷೆಯಲ್ಲಿ 507 ನೇ ಸ್ಥಾನ ಪಡೆದು ಹೆಮ್ಮೆಯ ಸಾಧನೆ ಮಾಡಿದ ಮರ್ಕಝ್ ಪೂರ್ವ ವಿಧ್ಯಾರ್ಥಿ ಫಝಲ್ ನೂರಾನಿ ಅವರು ಇಂದು ಮರ್ಕಝ್ ಸ್ಥಾಪಕ ಕಾಂತಪುರಂ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಅವರನ್ನು ಭೇಟಿ ಮಾಡಿ ಸಂತೋಷ ಹಂಚಿಕೊಂಡರು. ಈ ಕುರಿತು ಸಂತೋಷದಿಂದ ಫೇಸ್'ಬುಕ್ ಪೋಸ್ಟನ್ನು ಉಸ್ತಾದರು ಹಂಚಿಕೊಂಡಿದ್ದಾರೆ. "ಮರ್ಕಝ್'ನ ಪ್ರತಿಯೊಂದು ವಿಧ್ಯಾರ್ಥಿಗಳು ಹೊರಹೋಗುವಾಗ ಅವರು ಭವಿಷ್ಯದಲ್ಲಿ ಉನ್ನತ ಸ್ಥಾನಕ್ಕೆ ತಲುಪಬೇಕು ಎಂದು ಆಶಿಸುತ್ತೇನೆ, ಹಾಗೆ ಹಲವಾರು ಸಾಧನೆ ಮಾಡಿದ ಮರ್ಕಝ್'ಗೆ ಇದು ಮತ್ತೊಂದು ವಿಶೇಷ ಸಾಧನೆ . ಮರ್ಕಝ್ ಎಕ್ಸೆಲನ್ಸಿ ಕ್ಯಾಂಪಸ್ ಮದೀನತ್ತುನ್ನೂರ್ ಸ್ಥಾಪಿಸುವಾಗ ಕಂಡ ಕನಸು ಸಾಕ್ಷಾತ್ಕಾರವಾಗುತ್ತಿರುವುದು ಅನುಭವವಾಗಿದೆ. ಹಲವಾರು ಪಿಹೆಚ್'ಡಿ, ಪ್ರತಿಷ್ಠಿತ ಸ್ಕಾಲರ್ಶಿಪ್ ಅರ್ಹತೆ, ವಿದೇಶದಲ್ಲಿ ಉನ್ನತ ಸಾಧನೆ , ಸಾಮಾಜಿಕ ರಂಗದಲ್ಲಿ ಮಿಂಚುತ್ತಿರುವ ನೂರಾನಿಗಳ ಸಾಧನೆಯ ಯಾತ್ರೆಯಲ್ಲಿ ಇದು ಅತ್ಯಂತ ಉತ್ಕೃಷ್ಟದ್ದಾಗಿದೆ , ಇದರ ಹಿಂದೆ ಸಹಕರಿಸಿದ, ಕಷ್ಟ ಪಟ್ಟ ಎಲ್ಲರನ್ನೂ ಸ್ಮರಿಸುತ್ತಾ , ಫಝಲ್ ನೂರಾನಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ" ಎಂದು ಪೋಸ್ಟಿನಲ್ಲಿ ಬರೆದಿದ್ದಾರೆ..
ಇದಕ್ಕೂ ಮೊದಲು ಮದೀನತ್ತುನ್ನೂರ್ ಸಾರಥಿ ಡಾ ಹಕೀಂ ಅಝ್'ಹರಿಯವರು ಫಝಲ್ ನೂರಾನಿ ಅವರನ್ನು ಅವರ ಮನೆಯಲ್ಲಿ ಭೇಟಿ ಮಾಡಿ ಅಭಿನಂದಿಸಿದ್ದರು. ಮದೀನತ್ತುನ್ನೂರ್ ಪೂರ್ವ ವಿಧ್ಯಾರ್ಥಿ ಸಂಘ ಪ್ರಿಸಮ್ ಫೌಂಡೇಶನ್ ಸದಸ್ಯರುಗಳು ಜತೆಗಿದ್ದರು. ಮದೀನತ್ತುನ್ನೂರ್ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಹಕೀಂ ಅಝ್'ಹರಿ ಈ ಕುರಿತು ಸಂತೋಷದ ಪೋಸ್ಟನ್ನು ನಿನ್ನೆಯೇ ಹಂಚಿಕೊಂಡಿದ್ದು, ಪರಿಶ್ರಮದಿಂದ ಎಲ್ಲವೂ ಸಾಧ್ಯವಿದೆ , ಫಝಲ್ ಎಲ್ಲ ವಿಧ್ಯಾರ್ಥಿಗಳಿಗೂ ಪ್ರಚೋದನೆಯಾಗಿದ್ದಾರೆ ಎಂದು ಬರೆದಿದ್ದಾರೆ.
2007 ರಲ್ಲಿ ಮರ್ಕಝ್ ಗಾರ್ಡನ್'ನಲ್ಲಿ ಸಿವಿಲ್ ಸರ್ವಿಸ್ ಅಕಾಡೆಮಿ ಸ್ಥಾಪಿಸಲಾಗಿತ್ತು
To post your articles and news,please signup. This facility will be available soon. Please wait...
© www.idondusuddi.site. All Rights Reserved. Design by myweb