✒️ನಾಸಿರ್ ಸಜೀಪ
ಕ್ಯಾಲಿಕಟ್ ನಿವಾಸಿ ಅಬ್ದುಲ್ ರಹೀಂ 2006 ರಲ್ಲಿ ಸೌದಿ ಅರೇಬಿಯಾ ದಲ್ಲಿ ಡ್ರೈವರ್ ಹುದ್ದೆಗೆ ಹೋದ. ತಕ್ಷಣ ಹುದ್ದೆಯೂ ಸಿಕ್ಕಿತು. ಕುಟುಂಬ ಸಂಕಷ್ಟದಲ್ಲಿ ಇದ್ದ ರಹೀಂ ಗೆ ಈ ಹುದ್ದೆ ಆಸರೆಯಾಯಿತು. ಇಪ್ಪತ್ತಾರು ವಯಸ್ಸಿನ ರಹೀಂ ಆರೋಗ್ಯ ವಂಚಿತನಾದ ಸೌದಿ ಅರೇಬಿಯಾ ದ *ಅನಸ್* ಎನ್ನುವ ಹುಡುಗನನ್ನು ಅವನಿಗೆ ಬೇಕಾದೆಡೆ ವಾಹನದಲ್ಲಿ ಕರೆದುಕೊಂಡು ಹೋಗುವುದೇ ಕೆಲಸವಾಗಿತ್ತು. ಆನಸ್ ಗೆ ಶ್ವಾಸಕೋಶಕ್ಕೆ ಸಂಬಂಧಿಸಿದ ಖಾಯಿಲೆ ಇದ್ದು ಅದಕ್ಕೆ ಬೇಕಾದ ಉಪಕರಣಗಳನ್ನು ಅಳವಡಿಸಲಾಗಿತ್ತು.
.
ಒಮ್ಮೆ ವಾಹನದಲ್ಲಿ ಹೋಗುತ್ತಾ ಟ್ರಾಫಿಕ್ ಸಿಗ್ನಲ್ ಬಿತ್ತು. ತಕ್ಷಣ ವಾಹನ ನಿಲ್ಲಿಸಿದ ರಹೀಂ. ಅದ್ಯಾಕೋ ಅನಸ್ ಗೆ ಅದು ಸರಿ ಕಾಣಲಿಲ್ಲ. ಸಿಟ್ಟಿನಿಂದ ರಹೀಂನ ತಲೆಗೆ ಹೊಡೆಯಲು ಪ್ರಾರಂಭಿಸಿದ. ರಹೀಂ ಅದನ್ನು ವಿರೋಧಿಸಿದಾಗ ಅವನ ಮುಖಕ್ಕೆ ಉಗುಳಲು ಪ್ರಾರಂಭಿಸಿದ ಅನಸ್. ಗೊಂದಲಕ್ಕೆ ಒಳಗಾದ ರಹೀಂ ತಡೆದುಕೊಳ್ಳಲು ಸಾಧ್ಯ ಆಗದೆ ಅನಸ್ ನೆಡೆಗೆ ಕೈ ಯನ್ನು ತೀವ್ರವಾಗಿ ಬೀಸಿದ. ಅಕಸ್ಮಾತ್ ಶ್ವಾಸಕ್ಕಾಗಿ ಹಾಕಿದ ಪೈಪ್ ತಪ್ಪಿತ್ತು. ಇದು ಕಂಡು ಕಂಗಾಲಾದ ರಹೀಂ ತಕ್ಷಣವೇ ಆಸ್ಪತ್ರೆಗೆ ಹೋದ. ಆದರೆ ಅಷ್ಟೊತ್ತಿಗೆ ಅನಸ್ ಪ್ರಾಣ ಹೋಗಿತ್ತು. ಪೊಲೀಸರು ರಹೀಂ ನನ್ನು ಬಂಧಿಸಿದರು. ಹದಿನೆಂಟು ವರ್ಷ ಜೈಲಿನಲ್ಲಿದ್ದ ರಹೀಂಗೆ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿತ್ತು. ಕಂಗಾಲಾದ ರಹೀಂ ಕುಟುಂಬ ಅನಸ್ ಕುಟುಂಬದಲ್ಲಿ ಕಾಡಿತು..ಬೇಡಿತು. ಒಂದೂವರೆ ಮಿಲಿಯನ್ ಸೌದಿ ರಿಯಾಲ್ ಅಂದಾಜು 34 ಕೋಟಿ ರೂಪಾಯಿ ಕೊಟ್ಟರೆ ಕೇಸ್ ಹಿಂಪಡೆಯುತ್ತೇವೆ ಎಂದು ಅನಸ್ ಕುಟುಂಬ ತಿಳಿಸಿದಾಗ ಸುಖದಲ್ಲಿಯೂ ಮತ್ತೊಂದು ಸಂಕಟ ರಹೀಂ ಕುಟುಂಬಕ್ಕೆ. ಕೇರಳ ಕುಗ್ಗಲಿಲ್ಲ. ಕೇರಳಕ್ಕೆ ಕೇರಳವೇ ಸೆಟೆದು ನಿಂತಿತು. ಇಡೀ ಕೆರಳವೇ ರಹೀಂ ತಮ್ಮ ಕುಟುಂಬವದೆನೆಂದು ಎಂಬಂತೆ ಆಸರೆಯಾಗಿ ನಿಂತಿತು.ಇಡೀ ಕೇರಳದ ಜನತೆ ತಾವೂ ಕೊಟ್ಟರು.. ಬೇರೆವರಲ್ಲಿಯೂ ಕೇಳಿದರು.... ಯಾಚಿದರು.....ಬೇಡಿದರು ರಹೀಮನ ತಾಯಿ ಕಣ್ಣೀರಕೋಡಿಯನ್ನು ಎಲ್ಲರಲ್ಲಿಯೂ ವಿವರಿಸಿದರು. ಇದನ್ನು ಕಂಡು ಕೋಟಿ ಕೊಟ್ಟವರೂ ಇದ್ದಾರೆ. ಒಂದು ರುಪಾಯಿ ಕೊಟ್ಟವರೂ ಇದ್ದಾರೆ....ವಯೋವೃದ್ಧರೂ.....ಮಹಿಳೆಯರೂ.....ಯುವಕರೂ...ಮಕ್ಕಳೂ....ಎಲ್ಲಾರೂ...ಎಲ್ಲಾರೂ....ಕೊಟ್ಟಿದ್ದೇ ಕೊಟ್ಟಿದ್ದು... ಬೇರೆ ಬೇರೆ ದೇಶ ರಾಜ್ಯದವರಿಂದಲೂ ಕೊಡಿಸಿದ್ರು.... ಕೇರಳದವರು ಎಷ್ಟು ಚುರುಕು ಎಂದರೆ ಸೌದಿ ಅರೇಬಿಯಾ ರವರಲ್ಲಿಯೇ ಕೇಳಿದರು. ಇದರ ಪರಿಣಾಮ ಕೇವಲ ಹತ್ತು ದಿನದಲ್ಲಿ ಸಂಗ್ರಹವಾಗಿದ್ದು ಒಂದಲ್ಲ..ಎರಡಲ್ಲ... 34 ಕೋಟಿ ರುಪಾಯಿ!!!...ಅಬ್ಬಾ!!! *ಇದು ಕೇರಳ....ಇದು ಕೇರಳ* ಆಗ ಅಲ್ಲಿ ಜಾತಿ ಇರಲಿಲ್ಲ....ಧರ್ಮ ಇರಲಿಲ್ಲ .....ಪಂಗಡ ಇರಲಿಲ್ಲ...ಅವನು..ಇವನು... ಇರಲಿಲ್ಲ..... ಕೇರಳ ಸ್ಟೋರಿ ಎಂಬ ಫಿಲಂ ನ ವಾಸನೆಯೇ ಇರಲಿಲ್ಲ. ಕೇರಳದವರಷ್ಟು ಸ್ವಾಭಿಮಾನಿಗಳು...ಅವರಷ್ಟು ದುಡಿಯುವವರು...ಅವರಷ್ಟು ತ್ಯಾಗಿಗಳು...ಯಾರೂ ಇಲ್ಲ. ಆದರೆ ಅವರ ಒಂದು ಕೊರತೆ ನಂಬಿಕೆಗೆ ಅರ್ಹತೆ ಕಡಿಮೆ.
To post your articles and news,please signup. This facility will be available soon. Please wait...
© www.idondusuddi.site. All Rights Reserved. Design by myweb