ಇತ್ತೀಚಿಗಿನ ದಿನಗಳಲ್ಲಿ ಮನೆಯಿಂದಲೇ ಕೆಲಸ ಮಾಡುವ ಸಾಧ್ಯತೆಗಳು ಮತ್ತು ಅವಕಾಶಗಳು ಹೆಚ್ಚುತ್ತಿದ್ದು , ಅದರ ಜತೆಗೆ ವಂಚನೆಗಳು ಮತ್ತು ಸುಳ್ಳು ಭರವಸೆಗಳೂ ಹೆಚ್ಚುತ್ತಿದ್ದು ಉದ್ಯೋಗಾಕಾಂಕ್ಷಿಗಳನ್ನು ಸಂಕಷ್ಟಕ್ಕೆ ಸಿಲುಕಿಸುವಂತಾಗಿದೆ . ಯಾವುದು ಸತ್ಯ ಮತ್ತು ಯಾವುದು ಸುಳ್ಳು ಎಂದು ಭೇರ್ಪಡಿಸುದು ಉದ್ಯೋಗಾಕಾಂಕ್ಷಿಗಳಿಗೆ ಕಷ್ಟದ ಕೆಲಸವಾಗಿ ಬದಲಾಗಿದೆ . ಡೇಟಾ ಎಂಟ್ರಿ ಕೆಲಸ ಮತ್ತು ಆನ್ಲೈನ್ ಪ್ರಮೋಷನ್ ಮುಂತಾದ ಕೆಲಸಗಳನ್ನು ನೀಡುವುದಾಗಿ ಭರವಸೆ ನೀಡುವ ವಂಚಕರು ನಿರುದ್ಯೋಗಿಗಳನ್ನು ಸುಲಭವಾಗಿ ತಮ್ಮ ವಂಚನೆಯ ಜಾಲಕ್ಕೆ ಸಿಲುಕಿಸುತಾರೆ.
ವರ್ಕ್ ಫ್ರಮ್ ಹೋಂ ವಂಚನೆ ಹೇಗೆ ನಡೆಸುತ್ತಾರೆ ?
ಈ ವಂಚನೆ ವಿವಿಧ ರೂಪದಲ್ಲಿ ನಡೆಯುತ್ತದೆ . ಸಾಮಾನ್ಯವಾಗಿ ಈ ವಂಚನೆ ಒಂದು ಮೆಸೇಜ್ ಮೂಲಕ ಆರಂಭವಾಗುತ್ತದೆ . ಕಂಪನಿ HR ಎಂಬ ಹೆಸರಿನಲ್ಲಿ ನಮ್ಮ ವಿವರಗಳನ್ನು ಕೇಳಿ ಒಂದು ಸಂದೇಶ ಬರುತದೆ. ನಂತರ ಯಾವುದೋ ಕಂಪನಿಯ ಸೋಶಿಯಲ್ ಮೀಡಿಯಾ ಅಕೌಂಟ್ ಮತ್ತು ಯೂ ಟ್ಯೂಬ್ ವೀಡಿಯೋಸ್ ಗಳನ್ನೂ ಲೈಕ್ ಮಾಡಲು ನಿರ್ದೇಶಿಸಲಾಗುತ್ತದೆ . ಅದರ ಸ್ಕ್ರೀನ್ ಶಾಟ್ ಕಳುಹಿಸಿದರೆ ನಮ್ಮ ಕೆಲಸದ ಪ್ರಥಮ ಆಧಾಯ ಎಂಬ ಹೆಸರಿನಲ್ಲಿ ಅವರ ವಿಶ್ವಾಸ ಗಳಿಸಲು ಬೇಕಾಗಿ ಸಣ್ಣ ಮೊತ್ತದ ಹಣವನ್ನೂ ನಮ್ಮ ಖಾತೆಗೆ ವರ್ಗಾಯಿಸುತ್ತಾರೆ .
ನಿಜವಾಗಿಯೂ ನಮ್ಮ ಅಕೌಂಟ್ಗೆ ಹಣ ಜಮೆ ಆದಾಗ ಇದೊಂದು ನಿಜವಾದ ಬ್ಯುಸಿನೆಸ್ ಎಂದು ನಂಬಿ ಅವರ ನಿರ್ದೇಶಗಳನ್ನು ಪಾಲಿಸಿದರೆ ನಂತರ ಇದು ಹೊಸ ತಿರುವು ಪಡೆಯುತ್ತದೆ. ನಿಮ್ಮನ್ನು ಟೆಲಿಗ್ರಾಂ ಗುಂಪಿಗೆ ಜಾಯಿನ್ ಆಗುವ ಲಿಂಕ್ ಕಳುಹಿಸಿ ಅದಕ್ಕೆ ಜಾಯಿನ್ ಮಾಡಲಾಗುತ್ತದೆ. ನಂತರ ಹೊಸ ಟಾಸ್ಕ್ ಗಳು ನಿಮಗೆ ನೀಡಲಾಗುತ್ತದೆ. ಸರಳವಾದ ಒಂದೊಂದು ಟಾಸ್ಕ್ ಮಾಡಿದರೆ ನಿಮ್ಮ ಅಕೌಂಟ್ಗೆ ಹಣ ಜಮೆ ಆದಂತೆ ತೋರಿಸಲಾಗುತ್ತದೆ . ಅಂದರೆ ನಿಮ್ಮ ಹೆಸರಿನಲ್ಲಿ ರಿಜಿಸ್ಟರ್ ಮಾಡಿದ ಅವರ ಫಕ್ ವೆಬ್ ಅಥವಾ ಆಪ್ ಅಕೌಂಟಿನ ವಾಲ್ಲೆಟ್ ನಲ್ಲಿ ನಿಮ್ಮ ಒಟ್ಟು ಗಳಿಕೆಯನ್ನು ನೋಡಲು ಸಾಧ್ಯವಾಗುತ್ತದೆ. ನಂತರ ಐದನೇ ಅಥವಾ ಕೊನೆಯ ಟಾಸ್ಕ್ ವ್ಯತ್ಯಸ್ಥವಾಗಿರುತ್ತದೆ. ನೀವು ಇದುವರೆಗೂ ಗಳಿಸಿದ ಹಣವನ್ನು ವಾಲ್ಲೆಟ್ ನಿಂದ ನಿಮ್ಮ ಬ್ಯಾಂಕ್ ಅಕೌಂಟ್ ಗೆ ವರ್ಗಾವಣೆ ಮಾಡಬೇಕಾದರೆ ಕೊನೆಯ ಚಾಲೆಂಜ್ ಅನ್ನೂ ಮುಗಿಸಬೇಕು. ಅದು ಹೇಗೆ ಅಂದರೆ,ನೀವು ೨೦೦೦,೩೦೦೦, ಅಥವಾ ೫೦೦೦ ಹೀಗೆ ವಿವಿಧ ಮೊತ್ತದ ಸ್ಕೀಮ್ ಗಳನ್ನು ಸೆಲೆಕ್ಟ್ ಮಾಡಿ ಅವರು ಹೇಳುವ ಅಕೌಂಟ್ ಖಾತೆಗೆ ಹಾಕಬೇಕು. ಹಾಗೆ ಮಾಡಿದರೆ ನಮಗೆ ಅದಕ್ಕಿಂತ ಮೊದಲು ಮಾಡಿದ ಟಾಸ್ಕ್ ನ ಗಳಿಕೆ ( ವಾಲ್ಲೆಟ್ ನಲ್ಲಿ ಕಾಣುವಂತಹದ್ದು ) ಮತ್ತು ನಾವು ಈಗ ಇನ್ವೆಸ್ಟ್ ಮಾಡುವ ಮೊತ್ತದ ಡಬಲ್ ಮೊತ್ತ ಪಡೆಯಬಹುದು ಅಂತ ಹೇಳಲಾಗುತದೆ . ಅದೇ ಸಮಯದಲ್ಲಿ ೫೦೦೦, ೨೦೦೦, ಹೀಗೆಯೇ ವಿವಿಧ ಸ್ಕೀಮ್ ಗಳನ್ನು ಸೆಲೆಕ್ಟ್ ಮಾಡಿ ಲಾಭ ಮಾಡಿಕೊಂಡ ಇತರ ಜನರು ಟೆಲಿಗ್ರಾಂ ನಲ್ಲಿ ಸ್ಕ್ರೀನ್ ಶಾಟ್ ಕಳುಹಿಸುತ್ತಾರೆ . ವಾಸ್ತವದಲ್ಲಿ ಅದು ಈ ವಂಚಕರೇ ಇತರ ಜನರಂತೆ ನಟಿಸಿ ಮಾಡುವ ಆಟವಾಗಿದೆ . ಅದನ್ನು ನಂಬಿ ನಾವೂ ಅದೇ ರೀತಿ ಮಾಡಿದರೆ ನಂತರ ನಮ್ಮ ಹಣ ಐದು ಸಾವಿರದಿಂದ ಐದು ಲಕ್ಷವನ್ನೂ ದಾಟಿ ಐವತ್ತು ಲಕ್ಷವೂ ಅವರ ಪಾಲಾಗುವ ಸಾಧ್ಯತೆ ಇದೆ !!.
ಮೇಲೆ ತಿಳಿಸಿದಂತಹ ಮಾರ್ಗಗಳನ್ನು ಹೊರತು ಪಡಿಸಿ ಇತರ ಹಲವು ವಿಧದಲ್ಲೂ ವಂಚಕರು ವಂಚಿಸುತ್ತಾರೆ . ಅದನ್ನು ತಿಳಿಯುದು ಹೇಗೆ ಎಂಬುದಕ್ಕೆ ಕೆಲವು ಮಾರ್ಗಗಳು ಇದೆ . ೧. ಮೊದಲಿಗೆ ನಮ್ಮಿಂದ ಹಣ ಪಡೆಯುವ ಯಾವುದೇ ಕಂಪನಿ ಗೆ ಹಣ ನೀಡದಿರಿ ೨. ಸುಲಭವಾಗಿ ಹಣ ಗಳಿಸುವ ಅವಕಾಶ ಮತ್ತು ಹೆಚ್ಚು ಸಂಬಳ ವಾಗ್ದಾನ ಮಾಡಿದರೆ ಸಂಶಯಪಡಿರಿ. ೩. ವಿದೇಶ ಉದ್ಯೋಗದ ಹೆಸರಲ್ಲಿ ವೀಸಾ ಮತ್ತು ಮೆಡಿಕಲ್ ಟೆಸ್ಟ್ ಎಂದು ಹಣ ಕೇಳಿದರೆ ಕಂಪನಿ ಯಾ ಅಧಿಕೃತೆ ಯನ್ನು ಸರ್ಚ್ ಮಾಡಿ ಅಧಿಕೃತ ಇಮೇಲ್ ಮತ್ತು ಕಾಲ್ ಮುಲಕ ಖಚಿತಪಡಿಸಿ ನಂತರ ಹಣ ವರ್ಗಾವಣೆ ಮಾಡಿ . ೪. ಸಾಮಾನ್ಯಕ್ಕಿಂತ ಹೆಚ್ಚು ಸಂಬಳ , ಮತ್ತು ಉದ್ಯೋಗಕ್ಕಾಗಿ ಪೇಮೆಂಟ್ ಮಾಡಲು ಪದೇ ಪದೇ ಕಾಲ್ ಮಾಡಿದರೆ ಅದು ಸುಳ್ಳು ಆಫರ್ ಎಂದು ತಿಳಿಯಿರಿ , ಕಾರಣ ಯಾವುದೇ ಕಂಪನಿ ಆ ರೀತಿ ಮಾಡೋದಿಲ್ಲ.
ನೀವು ಯಾವುದೇ ಸಂದರ್ಭದಲ್ಲಿ ಇಂತಹ ವಂಚನೆಯಲ್ಲಿ ಸಿಲುಕಿದ್ದೀರಾದರೆ ಎಲ್ಲ ಮೆಸೇಜ್ ಗಳ ಸ್ಕ್ರೀನ್ ಶಾಟ್ ಭದ್ರವಾಗಿ ಇಟ್ಟುಕೊಳ್ಳಿ , ಪೇಮೆಂಟ್ ಮಾಡಿದ ಮಾಹಿತಿಯ ಪುರಾವೆ ಇಟ್ಟುಕೊಳ್ಳಿ , ಧೈರ್ಯವಾಗಿ ಸೈಬರ್ ಕ್ರೈಂ, ಪೊಲೀಸ್ ಅಥವಾ ಸಂಬಂದಿತ ಅಧಿಕಾರಿಗಳಿಗೆ ದೂರು ನೀಡಿ . ಬ್ಯಾಂಕ್ ಮ್ಯಾನೇಜರ್ ಗೆ ಮಾಹಿತಿ ನೀಡಿ ಅಕೌಂಟ್ ಸೆಕ್ಯೂರ್ ಆಗಿರುವಂತೆ ನೋಡಿಕೊಳ್ಳಲು ವಿನಂತಿ ಮಾಡಿ . ಯಾವುದಕ್ಕೂ ಅಪರಿಚತರಿಗೆ ಹಣ ವರ್ಗಾಯಿಸುವ ಮೊದಲು ನೂರು ಬಾರಿ ಆಲೋಚಿಸಿ.
To post your articles and news,please signup. This facility will be available soon. Please wait...
© www.idondusuddi.site. All Rights Reserved. Design by myweb