ಸುಳ್ಯ :ಇಲ್ಲಿನ ಗಾಂಧಿನಗರ ಪೆಟ್ರೋಲ್ ಪಂಪ್ ಮುಂಭಾಗದಲ್ಲಿ ಇಂದು ಮತ್ತೊಮ್ಮೆ ಸುನ್ನೀ ಆದರ್ಶ ಸಮ್ಮೇಳನ ನಡೆಯಲಿದೆ. ಕಳೆದ ಕೆಲವು ವಾರಗಳ ಮುಂಚೆ ನೂತನವಾಗಿ ಪಂಥ ಸಳಪೀ ವಿಭಾಗದ ಒಂದು ಗುಂಪು ಪ್ರಥಮವಾಗಿ ಸುಳ್ಯದಲ್ಲಿ ಸಮ್ಮೇಳನದ ಹೆಸರಿನಲ್ಲಿ ಪರಂಪರಾಗತ ಇಸ್ಲಾಮೀ ವಿಶ್ವಾಸ ವಿಚಾರಗಳನ್ನು ಅವಹೇಳಿಸಿ ಮತ್ತು ಸುನ್ನೀ ಮುಸ್ಲಿಮರ ಮೇಲೆ ಶಿರ್ಕ್ ಆರೋಪಿಸಿ ಭಾಷಣಗಳು ನಡೆದಿತ್ತು. ಇದು ಇಲ್ಲಿನ ಸಾಮಾನ್ಯ ಮುಸ್ಲಿಮರಲ್ಲಿ ನೋವು ಮತ್ತು ಕೋಪವನ್ನು ತಂದಿತ್ತು. ಅದಕ್ಕೆ ಪ್ರತಿಯಾಗಿ ಅದೇ ಪೆಟ್ರೋಲ್ ಪಂಪ್ ಮುಂಭಾಗದಲ್ಲಿ ಬೃಹತ್ ಸುನ್ನೀ ಆದರ್ಶ ಸಮ್ಮೇಳನ ನಡೆಸಿ ಜನರಿಗೆ ಸತ್ಯ ಮನವರಿಕೆ ಮಾಡಲು ಸುಳ್ಯ ಝೋನ್ ಸುನ್ನೀ ನಾಯಕರ ಶ್ರಮ ಯಶಸ್ವಿಯಾಗಿ ನಡೆದಿತ್ತು. ಸಳಪಿಗಳ ವಿತಂಡವಾದಗಳಿಗೆ ಸ್ಪಷ್ಟ ಉತ್ತರವನ್ನೂ ಸಳಪೀ ಪಂಗಡದ ಭಯಾನಕತೆಯನ್ನೂ ಸುಂದರವಾಗಿ ವಿವರಿಸಲಾಗಿತ್ತು. .
ಸುನ್ನೀ ಸಮ್ಮೇಳನದ ಮೂಲಕ ಸಳಪಿಗಳ ಪೊಳ್ಳುವಾದಗಳನ್ನು ಜನರು ಮನವರಿಕೆ ಮಾಡಿದ್ದನ್ನು ಸಹಿಸದ ಸಳಪೀ ವಿಭಾಗದವರು ಮತ್ತೊಮ್ಮೆ ಸುಳ್ಳಾರೋಪ ಸಭೆಯನ್ನು ನಿನ್ನೆ ಶನಿವಾರ ರಾತ್ರಿ ನಡೆಸಿತ್ತು. ಎಂದಿನಂತೆ ಮುಸ್ಲಿಮರನ್ನು ಮುಶ್ರಿಕ್ ಮಾಡುವ ಭಾಷಣಗಳು ಹೊರತು ಹೊಸತು ಏನೂ ಇದ್ದಿರಲಿಲ್ಲ. ಬೆರಳೆಣಿಕೆಯಷ್ಟು ಜನರು ಹೊರತುಪಡಿಸಿ ಮತ್ತೆ ಯಾರೂ ಅತ್ತ ಕಡೆ ಮುಖ ಮಾಡಲಿಲ್ಲ. ಇದೀಗ ಆ ಬೆರಳೆಣಿಕೆಯ ಜನರ ಸಂಶಯಗಳನ್ನು ತೀರಿಸಲು ಸುನ್ನೀ ಆದರ್ಶ ಮುಖಾಮುಖಿ ಇಂದು ನಡೆಸಲಾಗುತ್ತದೆ. ಪ್ರಶ್ನೆಗಳನ್ನು ಕೇಳಿ ಕಲಿಯಲು ಮುಕ್ತ ಅವಕಾಶ ನೀಡಲಾಗಿದ್ದು. ಪ್ರಭಾವೀ ಸುನ್ನೀ ಉಲಮಾ ನಾಯಕರು ನೇತೃತ್ವ ನೀಡಲಿದ್ದಾರೆ.
ಶಾಂತವಾಗಿದ್ದ ಸುಳ್ಯ ಟೌನ್ ಪರಿಸರ ಇದೀಗ ಶಬ್ದ ಕೋಲಾಹಲಗಳಿಗೆ ತೆರೆದಿದ್ದು ನಾಗರಿಕರಿಗೆ ತೊಂದರೆಯನ್ನು ಉಂಟುಮಾಡುತ್ತಿದೆ. ಪರಂಪರಾಗತ ಮುಸ್ಲಿಮ್ ವಿಶ್ವಾಸಗಳನ್ನು ಅವಹೇಳಿಸಿ ಇಂತಹ ತೆರೆದ ಚರ್ಚೆಗಳಿಗೆ ಕಿಡಿ ಹೊತ್ತಿಸಿದ ಸಳಪೀ ನಾಯಕರ ವಿರುದ್ಧ ಸಾರ್ವಜನಿಕರ ನಡುವೆ ವ್ಯಾಪಕ ಆಕ್ರೋಶ ಕೇಳಿ ಬಂದಿದೆ. ಇನ್ನು ಮುಂದಕ್ಕೆ ಸುಳ್ಯ ಟೌನ್'ನಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಇಂತಹ ಸಭೆಗಳಿಗೆ ಅವಕಾಶ ನೀಡಬಾರದು ಎಂಬ ಕೂಗು ಕೇಳಿ ಬಂದಿದೆ.
To post your articles and news,please signup. This facility will be available soon. Please wait...
© www.idondusuddi.site. All Rights Reserved. Design by myweb