ಮುಸಲ್ಮಾನರ ಪವಿತ್ರವಾದ ಪ್ರಾರ್ಥನೆ ಕೇಂದ್ರಗಳಾದ ಮಸೀದಿ ಮದ್ರಸಗಳಲ್ಲಿ ಶಸ್ತ್ರಾಸ್ತ್ರ ಹಾಗು ಅಕ್ರಮ ಚಟುವಟಿಕೆಗಳು ನಡೆಯುತ್ತಿದೆ ಎಂದು ಸುಳ್ಳು ಹೇಳಿ ಕೋಮು ದ್ವೇಷ ಭಾಷಣಗಳನ್ನು ಮಾಡಿ ಜಿಲ್ಲೆಯ ಶಾಂತಿ ಸಾಮರಸ್ಯಗಳನ್ನು ಕೆಡಿಸುತ್ತಿರುವ ಬೆಳ್ತಂಗಡಿ ಶಾಸಕ ಹರೀಷ್ ಪೂಂಜರ ವಿರುದ್ದ SKSSF ಮಡಂತ್ಯಾರ್ ಕ್ಲಸ್ಟರ್ ವತಿಯಿಂದ ಪುಂಜಾಲಕಟ್ಟೆ ಪೋಲಿಸ್ ಠಾಣೆಯಲ್ಲಿ ದೂರು ನೀಡಲಾಯಿತು.ಪ್ರತಿಯೊಂದು ಕಾರ್ಯಕ್ರಮದ ವೇದಿಕೆಯಲ್ಲಿ ನಿಂತು ಮುಸಲ್ಮಾನರ ವಿರುದ್ದ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ಸುಳ್ಳು ಭಾಷಣ ಮಾಡಿ ಜಾತಿ ಜಾತಿಗಳ ಮದ್ಯ ವಿಷಬೀಜವನ್ನು ಬಿತ್ತಿ ಜೆಲ್ಲೆಯ ಶಾಂತಿಗೆ ಭಂಗ ತರುತ್ತಿರುವ ಶಾಸಕನನ್ನು ಕೂಡಲೇ ತನಿಖೆ ಮಾಡಿ ಸೂಕ್ತ ಕಾನೂನು ಕ್ರಮಗಳನ್ನು ಜರುಗಿಸಬೇಕೆಂದು ಮನವಿ ಮೂಲಕ ತಿಳಿಸಲಾಯಿತು. ನಿಯೋಗದಲ್ಲಿ SKSSF ಮಡಂತ್ಯಾರ್ ಕ್ಲಸ್ಟರ್ ಅದ್ಯಕ್ಷರಾದ H E ಹನೀಫ್ ದೂಮಳಿಕೆ ಕಾರ್ಯದರ್ಶಿ ಶಾಕಿರ್ ಅಝ್ಹರಿ ಬಂಗೇರಕಟ್ಟೆ ವರ್ಕಿಂಗ್ ಕಾರ್ಯದರ್ಶಿ ಯುಸುಫ್ ಕೌಸರ್ ಪುಂಜಾಲಕಟ್ಟೆ ಹಾಗು ಸದಸ್ಯರುಗಳಾದ ಉಮ್ಮರ್ ಮುಸ್ಲಿಯಾರ್ ಪಾಂಡವರಕಲ್ಲು ಅಬ್ದುಲ್ ಕಾದರ್ ಮುಸ್ಲಿಯಾರ್,ಹಸೀಫ್ ದಾರಿಮಿ,ಮುನೀರ್,ಕತ್ತಾದ್, ನಮೀರ್, ಹರ್ಶದ್, ತಹ್ಸೀನ್ ಪುಂಜಾಲಕಟ್ಟೆ ಮುಂತಾದವರು ಉಪಸ್ಥಿತರಿದ್ದರು..
To post your articles and news,please signup. This facility will be available soon. Please wait...
© www.idondusuddi.site. All Rights Reserved. Design by myweb