ಬಿಸಿ ರೋಡ್': ಬಿಜೆಪಿ ನೇತೃತ್ವದ ಎನ್ ಡಿ ಎ ಸರ್ಕಾರವು ಅಧಿಕಾರವನ್ನು ವಹಿಸಿದ ನಂತರ ವಿಜಯೋತ್ಸವದ ಸಂದರ್ಭದಲ್ಲಿ ಬೋಳಿಯಾರಿನಲ್ಲಿ ನಡೆದ ಅಹಿತಕರ ಘಟನೆಯ ಬಗ್ಗೆ ದ್ವೇಷಪೂರಿತ ಹೇಳಿಕೆಯನ್ನು ನೀಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಮಿತ್ತಬೈಲ್ ಕೇಂದ್ರ ಮುಹಿಯ್ಯುದ್ದೀನ್ ಜುಮಾ ಜುಮಾ ಮಸೀದಿ ಆಡಳಿತ ಸಮಿತಿಯ ಪರವಾಗಿ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಂಟ್ವಾಳ ಪುರಸಭೆ ಸದಸ್ಯರಾದ ಮುಹಮ್ಮದ್ ಶರೀಫ್ ಜಮಾತ್ ಉಪಾಧ್ಯಕ್ಷರಾದ ಜಮಾಲ್ ಕಾರ್ಯದರ್ಶಿಗಳಾದ ಅಶ್ರಫ್ ಶಾಂತಿಅಂಗಡಿ ಆದಂ ಪಲ್ಲ ಹಾಗು ಆಡಳಿತ ಸಮಿತಿ ಸದಸ್ಯರಾದ ಹನೀಫ್ ಉಸ್ತಾದ್, ಅಜೀಜ್ ತಾಳಿಪಡ್ಪು ಉಪಸ್ಥಿತರಿದ್ದರು..
To post your articles and news,please signup. This facility will be available soon. Please wait...
© www.idondusuddi.site. All Rights Reserved. Design by myweb