ಖ್ಯಾತ ವೇಗದ ಬೌಲರ್ ಇಂಗ್ಲೆಂಡಿನ ಜೇಮ್ಸ್ ಆಂಡರ್ಸನ್ ಅಂತರಾಷ್ಟ್ರೀಯ ಕ್ರಿಕೆಟ್ ಬೌಲಿಂಗ್‌ನಲ್ಲಿ ಹೊಸ ದಾಖಲೆ ನಿರ್ಮಿಸುವ ಹೊಸ್ತಿಲಿನಲ್ಲಿ ಇದ್ದಾರೆ. ಧರ್ಮಶಾಲದಲ್ಲಿ ಭಾರತದ ವಿರುದ್ದ ನಡೆಯಲಿರುವ ಐದನೇ ಮತ್ತು ಕೊನೆಯ ಟೆಸ್ಟ್ ಪಂದ್ಯದಲ್ಲಿ ಈ ದಾಖಲೆ ನಿರ್ಮಾಣ ಆಗುವ ಸಾಧ್ಯತೆ ಇದೆ. ಇನ್ನು ಎರಡು ವಿಕೆಟ್ ಪಡೆದರೆ ಶ್ರೀಲಂಕಾದ ಮುರಳೀಧರನ್ ಮತ್ತು ಆಸ್ಟ್ರೇಲಿಯಾದ ಶೇನ್ ವಾರ್ನ್ ನಂತರ ವಿಶ್ವ ಕ್ರಿಕೆಟ್ಟಿನಲ್ಲಿ 700 ವಿಕೆಟ್ ಪಡೆಸ ಬೌಲರ್ ಎಂಬ ಖ್ಯಾತಿಗೆ ಪಾತ್ರರಾಗಲಿದ್ದಾರೆ..
ವೇಗದ ಬೌಲಿಂಗ್ ವಿಭಾಗದಲ್ಲಿ 700 ವಿಕೆಟ್ ಪಡೆಯುವ ಮೊದಲ ಬೌಲರ್ ಎಂಬ ದಾಖಲೆ ಆಂಡರ್ಸನ್ ಪಾಲಾಗಲಿದೆ.ಕಾರಣ ಮುರಳೀಧರನ್ ಮತ್ತು ಶೇನ್ ವಾರ್ನ್ ಇಬ್ಬರು ಸ್ಪಿನ್ ಬೌಲರ್ ಆಗಿದ್ದರು. ಶ್ರೀಲಂಕಾದ ದೈತ್ಯ ಸ್ಪಿನ್ನರ್ ಮುರಳೀಧರನ್ 800 ವಿಕೆಟ್ ಪಡೆದಿದ್ದರೆ, ಶೇನ್ ವಾರ್ನ್ 708 ವಿಕೆಟ್ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. 698 ವಿಕೆಟ್ ಪಡೆದಿರುವ ಆಂಡರ್ಸನ್ 698 ವಿಕೆಟ್ ಪಡೆದು ಸದ್ಯಕ್ಕೆ ಮೂರನೇ ಸ್ಥಾನದಲ್ಲಿ ಇದ್ದಾರೆ.
ಭಾರತ ವಿರುದ್ದ ಟೆಸ್ಟ್ ಸರಣಿಯಲ್ಲಿ ವಿಜಯದ ಮೂಲಕ ಉತ್ತಮ ಆರಂಭ ಪಡೆದ ಇಂಗ್ಲೆಂಡ್ ನಂತರದ ಮೂರು ಪಂದ್ಯ ಗಳಲ್ಲೂ ಸೋಲುವ ಮೂಲಕ ಸರಣಿ ಬಿಟ್ಟು ಕೊಟ್ಟಿದೆ. ಇದೀಗ ಕೊನೆಯ ಪಂದ್ಯ ಧರ್ಮಶಾಲದಲ್ಲಿ ನಡೆಯಲಿದೆ
To post your articles and news,please signup. This facility will be available soon. Please wait...
© www.idondusuddi.site. All Rights Reserved. Design by myweb