ಪಾರ್ಲಿಮೆಂಟ್ ಮಸೀದಿಯ ಇಮಾಂ ಈಗ ಪಾರ್ಲಿಮೆಂಟ್ ಸದಸ್ಯ !, ಅಧಿವೇಶನದ ನಡುವೆಯೇ ಮಧ್ಯಾಹ್ನ ನಮಾಝ್-ಗೆ ಮಸೀದಿಯಲ್ಲಿ ನೇತೃತ್ವ

ಸೋಮವಾರ(25 ಜೂನ್) ಮಧ್ಯಾಹ್ನ 1 ಗಂಟೆಗೆ, ಪಾರ್ಲಿಮೆಂಟ್ ಸ್ಟ್ರೀಟ್‌ನಲ್ಲಿರುವ ಜಾಮಾ ಮಸೀದಿಯಲ್ಲಿ ಮಧ್ಯಾಹ್ನ ನಮಾಜ್‌ನ ಮೊದಲು, ಪ್ರಾರ್ಥನೆಗೆ ಆಗಮಿಸಿದವರ ನಡುವೆ ಕುತೂಹಲದ ಚರ್ಚೆ ನಡೆಯಿತು: "ಮಸೀದಿಯ ಸ್ಥಿರ ಇಮಾಮ್ ಇಂದು ಪ್ರಾರ್ಥನೆಗೆ ನೇತೃತ್ವ ನೀಡಲು ಸಮಯ ಕಂಡುಕೊಳ್ಳುತ್ತಾರೆಯೇ? ಅಥವಾ ಬೇರೆ ಇಮಾಂ ಬರುತ್ತಾರಾ ?" 48 ವರ್ಷದ ಮೊಹಿಬ್ಬುಲ್ಲಾ ನದ್ವಿ ಅವರು ಸುಮಾರು 30ರಷ್ಟು ಇದ್ದ ಜನರಿಗೆ ನಮಾಝಿನಲ್ಲಿ ಇಮಾಂ ನಿಂತು ಮುನ್ನಡೆಸಲು ಎಂದಿನಂತೆ ನಡೆದುಕೊಂಡು ಬರುತ್ತಿದ್ದಂತೆಯೇ ಕುತೂಹಲವು ನಿಮಿಷಗಳಲ್ಲಿ ಕೊನೆಗೊಂಡಿತು. ನಮಾಜ್ ಮಧ್ಯಾಹ್ನ 1.20 ಕ್ಕೆ ಪ್ರಾರಂಭವಾಯಿತು ಮತ್ತು ಇಮಾಂ ಮುಹಿಬ್ಬುಲ್ಲಾ ನದ್ವಿ ಪ್ರಾರ್ಥನೆಯ ನಂತರ ಸಂಸತ್ತಿಗೆ ಹಿಂತಿರುಗಿದರು! ಅಷ್ಟಕ್ಕೂ ಕುತೂಹಲಕ್ಕೆ ಕಾರಣ ಏನು ಅಂದರೆ , ಪಾರ್ಲಿಮೆಂಟ್ ಮಸೀದಿಯ ಇಮಾಂ ಮೊಹಿಬ್ಬುಲ್ಲಾ ನದ್ವಿ ಅವರು ಯುಪಿಯ ರಾಮ್‌ಪುರ ಕ್ಷೇತ್ರದಿಂದ ಈ ಬಾರಿ ಸಂಸದರಾಗಿ ಆಯ್ಕೆ ಆಗಿದ್ದರು ಮತ್ತು ಸೋಮವಾರ ತಮ್ಮ ಮೊದಲ ಸಂಸತ್ ಅಧಿವೇಶನದಲ್ಲಿ ಹಾಜರಾಗಿದ್ದರು. ಸಮಾಜವಾದಿ ಪಕ್ಷದಿಂದ ಕಣಕ್ಕಿಳಿದ ಅವರು, ಪಕ್ಷದ ಹಿರಿಯ ನಾಯಕ ಅಜಂ ಖಾನ್ ಅವರ ವಿರೋಧದ ಹೊರತಾಗಿಯೂ, ಅವರು ಬಿಜೆಪಿಯ ಹಾಲಿ ಸಂಸದ ಘನಶ್ಯಾಮ್ ಲೋಧಿ ಅವರನ್ನು 87,000 ಮತಗಳಿಂದ ಸೋಲಿಸುವ ಮೂಲಕ ಸಂಸದ ಸ್ಥಾನವನ್ನು ಪಡೆದರು. ರಾಂಪುರದ ಸುವಾರ್ ಪ್ರದೇಶದ ರಜಾನಗರ ಗ್ರಾಮದಲ್ಲಿ ಜನಿಸಿದ ಮೊಹಿಬ್ಬುಲ್ಲಾ ಅವರು ಲಕ್ನೋದ ದಾರುಲ್ ಉಲೂಮ್ ನದ್ವತುಲ್ ಉಲಮಾಗೆ ತೆರಳುವ ಮೊದಲು ಜಿಲ್ಲೆಯ ಮದ್ರಸಾ ಜಮೆಯುಲ್ ಉಲೂಮ್ ಫುರ್ಕಾನಿಯಾದಲ್ಲಿ ಅಧ್ಯಯನ ಮಾಡಿದರು. ನಂತರ ಅವರು ದೆಹಲಿಗೆ ಸ್ಥಳಾಂತರಗೊಂಡರು, ಅಲ್ಲಿ ಅವರು ಅರೇಬಿಕ್‌ನಲ್ಲಿ ತಮ್ಮ ಪದವಿಯನ್ನು ಪೂರ್ಣಗೊಳಿಸಿದರು ಮತ್ತು ಜಾಮಿಯಾದಿಂದ ಇಸ್ಲಾಮಿಕ್ ಅಧ್ಯಯನದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ದೆಹಲಿಯ ಸಂಸತ್ ಭವನದ ಹತ್ತಿರವೇ ಇರುವ ಮಸೀದಿ ಎಂಬ ಕಾರಣಕ್ಕೆ, 'ಪಾರ್ಲಿಮೆಂಟ್ ಮಸ್ಜಿದ್' ಎಂದೇ ಇದನ್ನು ಕರೆಯಲಾಗುತ್ತದೆ. ಮಸೀದಿಯ ಇಮಾಮ್ ಮೌಲಾನಾ ಮೊಹಿಬುಲ್ಲಾ ನದ್ವಿ ಹಲವು ವರ್ಷಗಳಿಂದ ಇಲ್ಲಿಗೆ ಬರುವ ಜನರು ಮತ್ತು ರಾಜಕೀಯ ಮುಖಂಡರ ನಡುವೆ ಸೇತುವೆಯಾಗಿದ್ದರು. 48 ವರ್ಷ ವಯಸ್ಸಿನ ನದ್ವಿ ಈಗ ಲೋಕಸಭೆಗೆ ಆಯ್ಕೆಯಾದ ಮೊದಲ ಇಮಾಮ್ ಆಗುವ ಮೂಲಕ ಧಾರ್ಮಿಕ ಆರಾಧನಾ ಸ್ಥಳ ಮತ್ತು ಪ್ರಜಾಪ್ರಭುತ್ವದ ದೇವಾಲಯದ ನಡುವಿನ ಅಂತರವನ್ನು ಕಡಿಮೆ ಮಾಡಿದ್ದಾರೆ. ಲೋಕಸಭಾ ಚುನಾವಣಾ ಸಂಧರ್ಭದಲ್ಲಿ ಚುನಾವಣಾ ಸಂಬಂಧಿತ ಹಿಂಸಾಚಾರ ಅಥವಾ ಆಕ್ರಮಗಳ ಹೆಸರಿನಲ್ಲಿ ಈ ಬಾರಿ ರಾಂಪುರದಲ್ಲಿ ಒಂದೇ ಒಂದು ಎಫ್‌ಐಆರ್ ದಾಖಲಾಗದಿರುವುದು ತನಗೆ ಅತ್ಯಂತ ತೃಪ್ತಿ ತಂದಿದೆ ಎಂದರು. "ಇಮಾಮ್ ಆಗಿ, ನಾನು ನಿಯಮಗಳನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಬೇಕಾಗಿತ್ತು. ನನ್ನ ಪ್ರಚಾರದ ಸಮಯದಲ್ಲಿ ನಿಯಮಗಳನ್ನು ಉಲ್ಲಂಘಿಸಿದರೆ, ಅದು ತಪ್ಪು ಸಂದೇಶವನ್ನು ರವಾನಿಸುತ್ತದೆ" ಎಂದು ಅವರು ಹೇಳಿದರು..

ಮಸೀದಿ, ಸಂಸತ್ ಮತ್ತು ತನ್ನ ಕ್ಷೇತ್ರದ ಸೇವೇ ಒಟ್ಟಾಗಿ ಮಾಡುವೆ.

image

ಸಂಸತ್ ಹತ್ತಿರ ಇರುವ ಮಸೀದಿಯಲ್ಲಿ ಇಮಾಮ್ ಆಗಿರುವುದರಿಂದ, ಸಂಸತ್ತಿನ ರಸ್ತೆಯುದ್ದಕ್ಕೂ, ನಮಾಜ್‌ಗೆ ಬರುವ ರಾಜಕಾರಣಿಗಳು ಮತ್ತು ಇತರ ಪ್ರಮುಖ ವ್ಯಕ್ತಿಗಳನ್ನು ಭೇಟಿ ಮಾಡಲು ಆಗಾಗ್ಗೆ ಅವಕಾಶಗಳು ಸಿಗುತ್ತದೆ. ಅವರ ಹಿಂದೆ ಪ್ರಾರ್ಥನೆಯಲ್ಲಿ ನಿಂತ ಪ್ರಮುಖರಲ್ಲಿ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಕೂಡ ಇದ್ದಾರೆ ಎಂದು ಮೊಹಿಬ್ಬುಲಾ ಸ್ಮರಿಸಿದರು. ಸಂಸತ್ತು, ಮಸೀದಿ ಸೇವೆ ಮತ್ತು ತನ್ನ ಕ್ಷೇತ್ರದ ನಡುವೆ ಹೇಗೆ ಹೊಂದಿಸಿಕೊಂಡು ಹೋಗುತ್ತೀರಿ ಎಂಬ ಪ್ರಶ್ನೆಗೆ, "ನಾನು ರಾಂಪುರದಲ್ಲಿ ಸ್ಥಳೀಯ. ನಾನು ಅಲ್ಲಿಯೇ ಹುಟ್ಟಿದ್ದೇನೆ. ಕ್ಷೇತ್ರದಲ್ಲಿ ಎರಡು-ಮೂರು ದಿನ ಮೀಸಲಿಟ್ಟರೆ ಸಾಕು ಎಂದು ಜನರು ನನಗೆ ಹೇಳಿದ್ದಾರೆ. ಜೊತೆಗೆ, ಈಗ ದೂರಸಂಪರ್ಕ ಸಂವಹನ ಬಹಳ ಸುಲಭ ಮತ್ತು ಕೇವಲ ಮೂರು ಘಂಟೆಯಲ್ಲಿ ರಾಂಪುರ ತಲುಪಲು ಸಾಧ್ಯ. ಆದ್ದರಿಂದ ನನಗೆ ಮಸೀದಿಯ ಸೇವೆ ಮತ್ತು ಸಂಸದನಾಗಿ ಜನರ ಸೇವೆ ನೀಡಲು ಯಾವುದೇ ತೊಂದರೆ ಆಗದು" ಎಂದು ಖಾತರಿಪಡಿಸಿದರು.

image

ಇತರ ಚಿತ್ರಗಳು

WhatsApp

facebook

Advertisement

Market your buisiness here

Trending News

Newsletter

To post your articles and news,please signup. This facility will be available soon. Please wait...

share your favorite articles and news

ಅಪಘಾತ ಸುದ್ದಿ

Get In Touch

idondusuddi , street @ idondusuddi

+91912345678

idondusuddi@gmail.com

Follow Us
Popular News
Flickr Photos

© www.idondusuddi.site. All Rights Reserved. Design by myweb