ಮಂಗಳೂರು : ಇಂಡಿಯನ್ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎಪಿ ಅಬೂಬಕ್ಕರ್ ಮುಸ್ಲಿಯಾರ್ ನಾಳೆ ಮಂಗಳೂರಿಗೆ ಆಗಮಿಸಲಿದ್ದಾರೆ. ನಾಳೆ ಬೆಳಗ್ಗಿನಿಂದ ಸಂಜೆಯವರೆಗೆ ವಿವಿಧ ಕಾರ್ಯಕ್ರಮಗಳಲ್ಲಿ ಉಸ್ತಾದರು ಭಾಗವಹಿಸುವಲಿದ್ದಾರೆ.
ಬೆಳಗ್ಗೆ 10 ಗಂಟೆಗೆ ಬಿಸಿರೋಡ್ ಸಮೀಪ ಸಾಗರ್ ಆಡಿಟೋರಿಯಂ ನಲ್ಲಿ ಬೃಹತ್ ಸಖಾಫಿ ಸಂಗಮ ನಡೆಯಲಿದೆ, ಕರ್ನಾಟಕದಲ್ಲಿರುವ ಉಸ್ತಾದರ ಸಂಪೂರ್ಣ ಶಿಷ್ಯಂದಿರ ಸಂಗಮ ಇದಾಗಲಿದೆ.
ಸಂಜೆ 3:30ಕ್ಕೆ ಉಳ್ಳಾಲಕ್ಕೆ ಆಗಮಿಸಲಿರುವ ಉಸ್ತಾದರು , ಸಯ್ಯದ್ ಮದನಿ ಅರೇಬಿಕ್ ಕಾಲೇಜ್ ಹಾಸ್ಟೆಲ್ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಖಾಝೀ ಕೂರತ್ ತಂಗಳ್ ನೇತೃತ್ವ ನೀಡುವ ಸಮಾರಂಭವನ್ನು ಸಯ್ಯದ್ ಆಟಕ್ಕೋಯ ತಂಗಳ್ ಕುಂಬೋಳ್ ಉದ್ಘಾಟಿಸಲಿದ್ದಾರೆ. ಯುಟಿ ಖಾದರ್ ಉಪಸ್ಥಿತರಿರುವರು.
ಇದಲ್ಲದೆ ಪ್ರಸಕ್ತ ಧಾರ್ಮಿಕ ಮತ್ತು ಸಾಮಾಜಿಕ ವಿಷಯಗಳ ಬಗ್ಗೆ ಅಗತ್ಯ ಚರ್ಚೆಗಳು ಗ್ರಾಂಡ್ ಮುಫ್ತಿಯ ನೇತೃತ್ವದಲ್ಲಿ ನಡೆಯಲಿದೆ..
To post your articles and news,please signup. This facility will be available soon. Please wait...
© www.idondusuddi.site. All Rights Reserved. Design by myweb