ಮುಸ್ಲಿಂ ಲೀಗ್ ವಿರುದ್ಧವಾಗಿ ಕಾರ್ಯಚರಿಸಿದರೆ ಮಹಲ್ಲುಗಳು ಛಿದ್ರವಾಗಬಹುದು ! ನಾಸಿರ್ ಫೈಝಿ ಕೂಡತ್ತಾಯಿ ಎಚ್ಚರಿಕೆ.

ಕೇರಳ : ಲೋಕಸಭಾ ಚುನಾವಣಾ ಪ್ರಚಾರ ಕಾರ್ಯಚರಣೆಗಳು ರಂಗೇರುತ್ತಿದ್ದು , ದೇಶದಾದ್ಯಂತ ಅಭ್ಯರ್ಥಿಗಳು ತಮ್ಮ ವಿಜಯಕ್ಕಾಗಿ ವಿವಿದ ಕಸರತ್ತುಗಳನ್ನು ನಡೆಸುತ್ತಿದ್ದು , ತಮ್ಮ ಪರವಾಗಿ ಮತ ಚಲಾವಣೆ ಆಗಲು ಧಾರ್ಮಿಕ ಸಾಮಾಜಿಕ ಸಂಘಟನೆಗಳನ್ನೂ, ಅದರ ನಾಯಕರನ್ನೂ ತಮ್ಮ ಅನುಕೂಲಕ್ಕಾಗಿ ಬಳಸಲು ಪ್ರಯತ್ನಿಸುತ್ತಿದ್ದಾರೆ. ಕೇರಳದಲ್ಲಂತೂ ಧಾರ್ಮಿಕ ಮತ್ತು ರಾಜಕೀಯ ಸಂಘಟನೆಗಳ ನಡುವೆ ಸಣ್ಣದಾದ ಅಂತರವಷ್ಟೇ ಇದ್ದು ಧಾರ್ಮಿಕ ಸಂಘಟನೆಯ ನಿಲುವುಗಳು ರಾಜಕೀಯವಾಗಿ ಗಂಭೀರವಾಗಿ ಪ್ರಭಾವ ಬೀರುತ್ತದೆ.ಕೇರಳದ ಪ್ರಮುಖ ಧಾರ್ಮಿಕ ಸಂಘವಾದ ಸಮಸ್ತ ಇಕೆ ವಿಭಾಗ ಪರಂಪರಾಗತವಾಗಿ ಮುಸ್ಲಿಂ ಲೀಗ್ ಪರ ನಿಲುವು ಹೊಂದಿದ್ದು ಈ ಬಾರಿ ಕೆಲವು ಅಹಿತಕರ ಘಟನೆಗಳ ಕಾರಣದಿಂದ ಇಕೆ ವಿಭಾಗದ ಒಳಗಿನಿಂದ ಮುಸ್ಲಿಂ ಲೀಗ್ ವಿರುದ್ದ ಶಬ್ದಗಳು ಶಕ್ತವಾಗಿ ಬೆಳೆದು ಬರುತ್ತಿದ್ದು, ಇದು ಈ ಬಾರಿಯ ಚುನಾವಣೆಯಲ್ಲಿ ಪರಿಣಾಮ ಬೀರುವ ಹಂತಕ್ಕೆ ಬಂದು‌ ನಿಂತಿದೆ. ಸಮಸ್ತ ಇಕೆ ವಿಭಾಗದ ಪ್ರಮುಖ ನಾಯಕ ನಾಸಿರ್ ಫೈಝಿ ಕೊಡತ್ತಾಯಿ ಮುಸ್ಲಿಂ ಲೀಗ್ ಪರ ಪ್ರಮುಖ ಪ್ರತಿಪಾದಕರಾಗಿದ್ದಾರೆ. ಸಂಘಟನಾ ಪ್ರಭಾವವನ್ನು ಲೀಗ್ ಪರ ನಿಲುವಿಗಾಗಿ ಕಾಲಾಂತರದಿಂದ ಬಳಸುತ್ತಾ ಬಂದಿದ್ದಾರೆ. ಪ್ರಸ್ತುತ ಕಾರ್ಯಕರ್ತರ ಲೀಗ್ ವಿರುದ್ದ ನಿಲುವಿನಿಂದ ಆತಂಕಗೊಂಡಿರುವ ಫೈಝಿ , ಲೀಗ್ ವಿರುದ್ಧ ಕಾರ್ಯಾಚರಣೆ ನಡೆದರೆ ಮಹಲ್ಲುಗಳು(ಮಸೀದಿ ಕೇಂದ್ರೀಕೃತ ಊರ ಪ್ರದೇಶ) ಛಿದ್ರವಾಗಬಹುದು ಎಂದು ಎಚ್ಚರಿಸಿದ್ದಾರೆ..

ನಾಸಿರ್ ಫೈಝಿಯದ್ದು ವಯಕ್ತಿಕ ನಿಲುವು, ಸಮಸ್ತಕ್ಕೆ ಬಂಧವಿಲ್ಲ- ಜಿಫ್ರೀ ತಂಗಳ್

image

ಚುನಾವಣಾ ಕುರಿತು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಜಿಫ್ರೀ ತಂಗಳ್ , ನಾಸರ್ ಫೈಝಿಯ ಪ್ರಸ್ತಾವನೆಯ ಕುರಿತ ಪ್ರಶ್ನೆಗೆ, ಸಮಸ್ತಕ್ಕೆ ಅಂತಹ ನಿಲುವು ಇಲ್ಲ , ನಾಸಿರ್ ಫೈಝಿಯದ್ದು ಅವರ ವಯಕ್ತಿಕ ನಿಲುವು ಮಾತ್ರ ಎಂದು ಸ್ಪಷ್ಟಪಡಿಸಿದ್ದಾರೆ. ಭಾರತ ದೇಶದ ಸಾಂವಿಧಾನಿಕ ಮೌಲ್ಯಗಳನ್ನು ಸಂರಕ್ಷಿಸುವ ಎಲ್ಲ ಪಕ್ಷಗಳಲ್ಲಿಯೂ ಸಮಸ್ತದ ಅನುಯಾಯಿಗಳು ಇದ್ದಾರೆ. ಯಾವುದೇ ಪ್ರತ್ಯೇಕ ರಾಜಕೀಯ ಪಕ್ಷದೊಂದಿಗೆ ವಿಶೇಷವಾದ ಒಲವು ಅಥವ ವಿರೋಧ ಸಮಸ್ತಕ್ಕೆ ಇಲ್ಲ ಎಂದು ಹೇಳಿದರು. ರಾಷ್ಟ್ರಕ್ಕೆ ಉಪಕಾರವಾಗುವಂತಹ ಪಕ್ಷಕ್ಕೆ ಮತ ಚಲಾಯಿಸಬೇಕು ಎಂದರು.

image

ವಿವಾದ ಪ್ರಸ್ತಾವನೆಯ ನಂತರ ವ್ಯಾಪಕ ಟೀಕೆಗಳು ಕೇಳಿ ಬಂದ ನಂತರ ಫೇಸ್'ಬುಕ್ಕಿನಲ್ಲಿ ಸ್ಪಷ್ಟೀಕರಣ ಬರಹ ನೀಡಿದ ನಾಸರ್ ಫೈಝಿಯ ಫೇಸ್'ಬುಕ್ ಪೋಸ್ಟಿನಲ್ಲಿ "ಮುಸ್ಲಿಂ ಲೀಗ್ ವಿರುದ್ಧ ಕಾರ್ಯಚರಣೆ ಮಾಡಿದರೆ ಮಹಲ್ಲುಗಳಲ್ಲಿ ಸಮಸ್ಯೆಗಳು ಸೃಷ್ಟಿಯಾಗಬಹುದು ಎಂದು ನಾನು ಹೇಳಿದ್ದೇನೆಯೇ ಹೊರತು ಮುಸ್ಲಿಂ ಲೀಗ್ ಸೋತರೆ ಮಹಲ್ಲುಗಳಲ್ಲಿ ಸಮಸ್ಯಯನ್ನು ಸೃಷ್ಟಿಸುತ್ತಾರೆ ಎಂದು ನಾನು ಹೇಳಿದ್ದಾಗಿ ದುರ್ವ್ಯಾಖ್ಯಾನ ಗೊಳಿಸಲಾಗಿದೆ ಎಂದರು" . ಒಟ್ಟಿನಲ್ಲಿ ಲೀಗ್ ಪರ ತನ್ನ ನಿಲುವು ಮತ್ತು ತನ್ನ ವಿವಾದ ಪ್ರಸ್ತಾವನೆಯಿಂದ ಅವರು ಹಿಂದೆ ಸರಿದಿಲ್ಲ ಎಂಬುದು ಸ್ಪಷ್ಟ !

ಇತರ ಚಿತ್ರಗಳು

WhatsApp

facebook

Advertisement

Market your buisiness here

Trending News

Newsletter

To post your articles and news,please signup. This facility will be available soon. Please wait...

share your favorite articles and news

ಅಪಘಾತ ಸುದ್ದಿ

Get In Touch

idondusuddi , street @ idondusuddi

+91912345678

idondusuddi@gmail.com

Follow Us
Popular News
Flickr Photos

© www.idondusuddi.site. All Rights Reserved. Design by myweb